Samadhana lyrics ( kannada ) – kiss – super cine lyrics

Samadhana – Naveen sajju , V Harikrishna Lyrics

Singer Naveen sajju , V Harikrishna

About the song

▪ Singer: Naveen Sajju & V Harikrishna
▪ Lyricist: A P Arjun
▪ Music: V Harikrishna
▪ Starcast: Viraat, Sreeleela
▪ Director: A P Arjun
▪ Producer: A P Arjun
▪ Music Label: D Beats Music World

Lyrics

ಪ್ರೀತ್ಸಿದ್ ಹುಡುಗಿ ಬಿಟ್ಟೋಗ್ಬಿಟ್ರೆ
ತಡ್ಕೋ ಬೇಕು ಮಗ!
ಕ್ಯಾಕ್ರುಸುಗುದು ಹೊಂಟೋಗ್ಬಿಟ್ರೆ
ಒರ್ಸ್ಕೋ ಬೇಕು ಮಗ!
ಫೀಲಿಂಗ್ ಜಾಸ್ತಿ ಆಗೋಗ್ಬಿಟ್ರೆ
ಕುಡ್ಕೋ ಬೇಕು ಮಗ!
ಎಲ್ಲ ಮರೆತು ಹೋಗ್ಬೆಕಂದ್ರೆ
ಕಕ್ಬುಡ್ಬೇಕು ಮಗ!
ಮಗ.. ಮಗ.. ನಂದು ಮಗ..
ಮಗ.. ನಂದು ಬೇಕು ಮಗ..!

ಸಮಾಧಾನ.. ಮಾಡ್ಕೋ ಮಗ!
ಸಮಾಧಾನ.. ಮಾಡ್ಕೋ ಮಗ!

ಕನ್ಸಲವ್ಳು ಬಂದುಬಿಟ್ರೆ
ಸೆಲ್ಫಿ ತಗೋ ಮಗ!
ಎದ್ರಿಗವ್ಳು ಸಿಕ್ಕಿಬಿಟ್ರೆ
ಕೆನ್ನೆಗ್ ಹೊಡ್ಕೋ ಮಗ!
ಹಾರ್ಟು ಚೂರು ಚೂರಾಗಿದೆ
ಅಂಟುಸ್ಬೋದು ಮಗ!
ಸತ್ತೊದಂಗೆ ಫೀಲಾಗ್ತಿದೆ
ಪ್ರೀತಿ ಹಂಗೆ ಮಗ!

ಕುಡ್ದು ಎದೆ ಉರಿತಿದೆ, ನೋವು ಒಳಗೆ ಮೆರಿತಿದೆ
ಭೂಮಿ ಉಲ್ಟಾ ಕಾಣುಸ್ತಿದೆ!
ಎದೆ ಮೇಲೆ ಕೈ ಇತ್ತು, ಪ್ರಾಮಿಸ್ ಮಾಡಿ ಬಿಟ್ಟೋಗ್ತಾರೆ
ಅಪ್ಪ ಅಮ್ಮ ರೀಸನ್ ಅಂತ!
ಬೆಳಗಿನ ಜಾವ ಕನ್ಸಲ್ ಬಂದು, ಬೆಣ್ಣೆ ತರ ಮಾತಾಡ್ತಾಳೆ
ಅಯ್ಯೋ… ಆ!
ತಿಂಗಳಾನ್ ಗಟ್ಲೆ ಪ್ರೀತಿ ಮಾಡಿ, ಸಣ್ಣ ತಪ್ಪಿಗ್ ಬಿಟ್ಟೋಗ್ತಾರೆ
ಅಯ್ಯೋ… ಹೋ!
ರಾತ್ರಿ ಹೊತ್ತು ಸೂರ್ಯ ಬಂದ್ರೆ
ನಂಬ್ಕೋ ಬೇಡ ಮಗ!
ಹುಡ್ಗಿ ಕೂಡ ಹಂಗೆ ಅಂತ, ತಿಳ್ಕೋ ಬಿಡು ಮಗ!
ಮಗ.. ಮಗ.. ನಂದು ಮಗ..
ನಂದು.. ನಂದು.. ನಂದೇ ಮಗ!

ಸಮಾಧಾನ.. ಮಾಡ್ಕೋ ಮಗ!
ಸಮಾಧಾನ.. ಮಾಡ್ಕೋ ಮಗ!

ಅಮ್ಮ ಹುಷಾರ್ ಅಂದಿದ್ಲು
ಮರ್ತೊಗ್ಬಿಟ್ಟ ಮಗ!
ಕಣ್ಣಲ್ ಕಣ್ಣೀರ್ ಬರ್ತಾ ಇದೆ
ಅಲ್ಲೇ ಬರೋದ್ ಮಗ!
ಅವಳೇ ಜೀವನ ಅನ್ಕೊಂಡಿದ್ದೆ
ಜೀವನ ಬೇರೆ ಮಗ!
ಮುಂದೆ ಏನೋ ಗೊತ್ತಾಗ್ತಿಲ್ಲಾ
ಇಷ್ಟೇ ಜೀವನ ಮಗ!

ಲವ್ವು ಲೆಟ್ಟ್ರು, ಖಾಲಿ ಕಾಗದ, ವೀಡಿಯೊ ಕಾಲು, ಎಂಪ್ಟಿ ಸ್ಕ್ರೀನು
ಪಕ್ದಲ್ಲಿ ಇದ್ರೂ ನಾಟ್ ರೀಚಬಲ್!
ಎಲ್ಲ ಸರಿ, ಇಗೋ ಪ್ರಾಬ್ಲಮ್, ಅದೇ ಹಾರ್ಟು, ಅದೇ ಲವ್ವು
ಬ್ರಾಂಡೆಡ್ ವಾಚ್ ಟೈಮು ರಾಂಗು!
ಆಕಾಶದಲ್ಲಿ ಅವ್ಳಿಗ್ ಒಂದು ಮನೆ ಕಟ್ಟಿ ಕೊಡೊ ಆಸೆ
ಅಯ್ಯೋ… ಆ!
ಹೃದಯಾನ ಪರ್ಮನೆಂಟ್ ಆಗಿ, ಅವಳ್ಗೆ ಬರದು ಕೊಡೊ ಆಸೆ
ಅಯ್ಯೋ… ಹೋ!
ಹುಡ್ಗೀರ್ ಕೆಂಪು ಬೊಟ್ಟು ಇಡೋದ್, ಯಾಕೆ ಗೊತ್ತ ಮಗ?
ಡೇಂಜರ್ ಅಂತ ಸೂಚನೆ ಅದು, ದೂರ ಇರಬೇಕ್ ಮಗ!
ಮಗ.. ಮಗ.. ನಂದು ಮಗ..
ನಂದು.. ನಂದು.. ನಂದೇ ಮಗ!

ಸಮಾಧಾನ.. ಮಾಡ್ಕೋ ಮಗ!
ಸಮಾಧಾನ.. ಮಾಡ್ಕೋ ಮಗ!

ಹೃದಯಾನ ಕೆರ್ಕೊಂಡೋರು
ಗೋಲ್ಡನ್ ಸ್ಟಾರು ಮಗ!
ರೆಡ್ದು ರೋಸು ಹಿಡ್ಕೊಂಡೋರು
ಕ್ರೇಜಿ ಸ್ಟಾರು ಮಗ!
ಪ್ರೀತಿ ಬದನೆ ಕಾಯಿ ಅಂದ್ರು
ರಿಯಲ್ ಸ್ಟಾರು ಮಗ!
ಸತ್ಯ ತಿಳ್ಕೊಂಡ್ ಸುಮ್ನಿದ್ದೋನೆ
ಸೂಪರ್ ಸ್ಟಾರು ಮಗ!

Leave a Comment

Contact Us