Rajanu rani song details
- Song : Rajanu rani
- Singer : S P Balasubrahmanyam, K S chitra
- Lyrics : Hamsalekha
- Movie : Mannina dhoni
- Music : Hamsalekha
Rajanu rani lyrics in kannada
ರಾಜನು ರಾಣಿ ಸಾಂಗ್ ಲಿರಿಕ್ಸ್
ರಾಜನು ರಾಣಿ ಸೇರಿದರಮ್ಮ
ಮಣ್ಣಿನ ದೋಣಿ ಏರಿದರಮ್ಮ ಸಾಗಿದರಮ್ಮ
ಮರಳಿನ ಮೇಲೆ ನಡೆಯದ ದೋಣಿ
ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
ಕಾಣಿಸದ ತೀರವದು ಜೀವನ ಕಡಲಿನಲ್ಲಿ
ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲ್ಲಿ
ಮನೆಯ ಕೊಡುವ ರಾಜ ಮನಸ್ಸು ಕೊಡೆನು ಎಂದ
ಬರೀ ಏಕಾಂತವೆ ಈ ಸಂಸಾರ
ವನ ವೇದಾಂತವೆ ಇಲ್ಲಿ ಪರಿಹಾರ
ಕನಸು ನನಸು ನಡುವೆ ನಡೆದ ರಾಣಿ ಮದುವೆ
ವಿಧಿ ಬಯಲಾಟದ ಒಂದು ಪರಿಹಾಸ
ಅದು ಬಿಡಿ ಹೇಳಲು ಬರೀ ಅಪಹಾಸ್ಯ
ರಾಜನು ರಾಣಿ ಸೇರಿದರಮ್ಮ
ಮಣ್ಣಿನ ದೋಣಿ ಏರಿದರಮ್ಮ ಸಾಗಿದರಮ್ಮ
ಮರಳಿನ ಮೇಲೆ ನಡೆಯದ ದೋಣಿ
ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
ಕಾಣಿಸದ ತೀರವದು ಜೀವನ ಕಡಲಿನಲ್ಲಿ
ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲ್ಲಿ
ಹಸಿರೇ ಇರದ ಬಯಲು ಬಯಸಿ ಬರದು ನವಿಲು
ತುಂಬಾ ವನರಾಜಿಯೆ ಅವಳ ತವರೂರು
ಪ್ರೀತಿ ಅನುರಾಗವೇ ಹೆಣ್ಣ ನೆರೆಯೋರು
ಹೂವೇ ಇರದ ಕಾಡು
ರಾಗ ಇರದ ಹಾಡು
ರಾಣಿ ಜೇನೆಂದಿಗೂ ಹೂವ ತೋಟದಲ್ಲಿ
ಗೂಡು ಪಡೆದಾಗಲೆ ಕ್ಷೇಮ ಬಾಳಿನಲ್ಲಿ
ರಾಜನ ರಾಣಿ ನೋಡಿದಳಮ್ಮ
ಹಿಂದಿನ ನೆನಪು ನೀಡಿದಳಮ್ಮ
ಹಾಡಿದಳಮ್ಮ
ಆಗಸದಲ್ಲಿ ಪ್ರಣಯದ ದೋಣಿ ಏರಲು ಕೈಲಿ
ಹೂವಿನ ಏಣಿ ತಂದಿಹಳಮ್ಮ
ಜೀವನವೆ ಅದರೊಳಗೆ ಮುತ್ತಿನ ಮಾಲೆ