Premam poojyam title song lyrics ( ಕನ್ನಡ ) – Premam poojyam

Premam poojyam title song details

  • Song : Premam poojyam title song
  • Singer : Hariharan
  • Lyrics : Dr Raghavendra B S
  • Movie : Premam poojyam
  • Music : Dr Raghavendra B S

Premam poojyam title song lyrics in Kannada

ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ

ಆ ನಿನ್ನ ನಗುವೆ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ

ಆ ನಿನ್ನ ನಗುವೆ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ

ನಮ್ಮಈ ಬಂಧನ
ಇದು ಸುರ ಗಾಯನ
ನಿನ್ನ ಈ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ
ಬಲು ಮನ ಮೋಹನ
ಈ ಪ್ರೇಮ ವರ್ಷಕೆ ಕೊಡೆಯಾ ಆಲಿಂಗನ
ಆಲಿಂಗನ

ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದ0
ಕಿರುಗಣ್ಣ ನೋಟ ಬಹುಮಾನ
ಅನುಕೂಲವಾಯ್ತು ಹವಾಮಾನ
ನಾ ನಿನ್ನ ಹೃದಯಕೆ ಯಜಮಾನ

ಆ ನಿನ್ನ ಬೈಗುಳ ಸವಿಗಾನ
ನಿನ್ನ ಸ್ಪಂದನ
ಎನ್ನ ಚಿರವಂದನ
ಬರಡಾದ ನೆಲದಲ್ಲಿ ನಿಜ ಕಾನನ
ನೀ ವರ ಚಂದನ ಎನ್ನ ಮನ ಚಿಂತನ
ಈ ಹೃದಯ ಸಾಗರದ ಮಹಾ ಮಂಥನ
ಮಂಥನಾ…

ಪ್ರೇಮಂ ಪೂಜ್ಯಂ ದೈವಂ ಚರಣಂ
ನಿತ್ಯಂ ನಿಲಯಂ ಸತ್ಯಂ ವರದಂ.

Premam poojyam title song video :

Leave a Comment

Contact Us