Preethi endarenu lyrics – Ragini bhat – super cine lyrics

Preethi endarenu – Ragini bhat Lyrics

Singer Ragini bhat

About the song

Lyrics : G S Shivarudrappa
Music & Arrangements : Ganesh Desai
Singer : Ragini Bhat (Ragini Vb)
Sound Engineer : Umesh Minnanda

Lyrics:

ಪ್ರೀತಿ ಎಂದರೇನು ಎಂದು
ನೀನು ನನ್ನ ಕೇಳಿದೆ
ನಾನು ಮಿಡುಕಿ ತಡಕಾಡಿದೆ
ಉತ್ತರ ಸಿಗಲಾರದೆ

ಪ್ರೀತಿ ಎಂದರೇನು ಎಂದು
ಆಕಾಶವ ಕೇಳಿದೆ
ಸೂರ್ಯ ಚಂದ್ರ ಚಿಕ್ಕೆ ಬಳಗ
ಮಾತಾಡದೆ ತಿರುಗಿವೆ

ಹೊಳೆಗಳೆಲ್ಲ ಕಡಲಿಗೋಡಿ
ಅಪ್ಪಿಕೊಂಡು ಕರಗಿವೆ
ಮೋಡವೆಲ್ಲ ಕೆಳಗೆ ಸುರಿದು
ನೆಲಕೆ ಮುತ್ತನೊತ್ತಿದೆ

ಪ್ರೀತಿ ಎಂದರೇನು ಎಂದು
ಎಂಥ ಪ್ರಶ್ನೆ ನಿನ್ನದೇ
ಹತ್ತಿರ ಬಾ ಹೇಳುತೇನೆ
ಇಳಿದು ನೋಡು ನನ್ನೆದೆ

Leave a Comment

Contact Us