O baana modagale lyrics ( ಕನ್ನಡ ) – Premam poojyam

O baana modagale song details

  • Song : O baana modagale
  • Singer : Sonu nigam
  • Lyrics : Raghavendra B S
  • Movie : Premam poojyam
  • Music : Raghavendra B S

O baana modagale lyrics in kannada

ಓ ಬಾಣ ಮೋಡಗಳೆ ಸಾಂಗ್ ಲಿರಿಕ್ಸ್

ಓ ಬಾಣ ಮೋಡಗಳೆ
ನನ್ನ ಕಥೆಯನ್ನು ಕೇಳುವಿರಿ
ಓ ಪ್ರಾಣಿ ಪಕ್ಷಿಗಳೆ
ನನ್ನ ವ್ಯಥೆಯನ್ನು ಕೇಳುವಿರಿ

ಯುಗ ಯುಗಗಳು ಸ್ಮರಿಸಿದರೂ ನಾನು
ಈ ಪ್ರೇಮ ದೊರಕುವುದೇ?
ವಿಧ ವಿಧದಲು ಭಜಿಸಿದರೂ ನಾನು
ಈ ಹಾಡು ಕೇಳುವುದೇ?

ಪರಿ ಪರಿಯಲ್ಲಿ ಪೂಜಿಸಿದರೂ ನಾನು
ಪ್ರೇಮ ದೇವಿ ಒಲಿಯುವುದೇ?
ಪದಪದದಲ್ಲೂ ಸ್ತುತಿಸಿದರೂ ನಾನು
ವರವಾಗಿ ಬರುವಳೇ?

ಪ್ರೇಮ ಪ್ರೀತಿ
ನನ್ನ ಹೃದಯದ ನಿಜ ಭೀತಿ
ಯಾವ ರೀತಿ
ಹೃದಯಕೆ ಹೇಳಲಿ ನಾ ನೀತಿ

ಮೂಡಾಯ್ತು ಹೊಂಗನಸು
ಖುಷಿಯಾಯ್ತು ಈ ಮನಸ್ಸು
ಈ ಪ್ರೀತಿ ಬಾಳು ಸೊಗಸು
ಓ ದೇವ ನೀ ಹರಸು

ಹನಿ ಹನಿಯುವ ಮಳೆಯಲಿ ನಿನ್ನ
ನಿಜ ಸ್ಪರ್ಶವ ಪಡೆಯುವೆನೊ
ಚಿಲಿಪಿಲಿಯ ದನಿಯಲ್ಲಿ ನಿನ್ನ
ಕಲರವ ಕೇಳುವೆನೊ

ಫಲ ಫಲಿಸುವ ರವಿತೆ ಜಡಲ್ಲಿ
ನಿನ್ನ ದರ್ಪಣ ನೋಡುವೆನೊ
ಝರ ಝರಿಸುವ ತಂಗಾಳಿಯಲ್ಲಿ
ಆಲಿಂಗನ ಪಡೆಯುವೆನೊ

ನಿನ್ನ ಪ್ರೀತಿ
ನನ್ನ ಹೃದಯದ ನಿಜ ಸ್ಪೂರ್ತಿ
ಯಾವ ರೀತಿ
ನಾ ಪಡೆಯಲಿ ಆ ಕೀರ್ತಿ….

O baana modagale song video :

Advertisement Advertisement

Leave a Comment

Advertisement Advertisement

Contact Us