Ninna nayana song lyrics – Mohan Krishna Lyrics
Singer | Mohan Krishna |
Song Writer | Ashwin Kodange |
ನಿನ್ ನಯನ!
ನಿನ್ ನಯನ ಕೇಶ ನೋಡಿ
ಮರುಳಾದೆ ನಾ
ನಿನ್ನ ಮನ!
ನಿನ್ನ ಮನವು ಶುದ್ದ ಶುಭ್ರ ಸ್ವಚ್ಛ
ಗಂಗಾ ಜಲ
ನಿನ್ನ ಕನ್ನಡಿಯಂತ ಕಣ್ಣಂಚಲಿ ನಾ
ಅಡಗಿರುವೆ ನಾ..
ನಿನ್ ನಯನ… ನಿನ ಮನ…
ನಿನ್ನ ಹೂ ಸುವಾಸನೆಯ ಮೈ ಗಂಧವು
ಬೀರಲು ಉಲ್ಲಾಸದಾಟ
ನಿನ್ನ ಹೂ ಸುವಾಸನೆಯ ಮೈ ಗಂಧವು
ಬೀರಲು ಉಲ್ಲಾಸದಾಟ
ನಿನ್ನ ಮನದ ಅಂಗಳದಿ ಚಂದ್ರ ಕಾಂತಿಯು
ಚೆಲ್ಲುವ ನನ್ನ ಶಾಂತ ನೋಟ
ನಿಂತೊಡೆ…
ನಿಂತೊಡೆ ನನ್ನೊಡೆ ನೀ
ಬೆರಗಾದೆ ನಾ..
ನಿನ್ ನಯನ... ನಿನ್ನ ಮನ…
ನಿನ್ನ ಒಂದೆ ಸ್ಪರ್ಷಕೆ ಕೆರಳಿ ನಿಂತಿವುದು
ನನ್ನ ತುಂಡಾದ ಮನಸು
ನಿನ್ನ ಒಂದೆ ಸ್ಪರ್ಷಕೆ ಕೆರಳಿ ನಿಂತಿವುದು
ನನ್ನ ತುಂಡಾದ ಮನಸು
ನಿನ್ನ ಜೀವನ ರಂಗೋಲಿ ರಂಗಾಗಿಸುವುದು
ನನ್ ತಿಕ್ಕ ಸವಿಗನಸು
ನಿಂತು ಲಜ್ಜಿಸದಿರು ನೀ..
ನಿಂತು ಲಜ್ಜಿಸದಿರು ನೀ..
ನನ್ನ ಸಾಮಾನ್ಯ ಹೃದಯ ಚಡಪಡಿಸಿದೆ..
ನಿನ್ ನಯನ.. ನಿನ್ನ ಮನ..
ನಿನ್ ನಯನ..
ನಿನ್ನ ಮನ..
ನಿನ್ನ ಕೇಶ ನೋಡಿ
ಮರುಳಾದೆ ನಾ
ನಾ ಬೆರಗಿ!
ನಾ ಕೊರಗಿ!
ನಾ ಕರಗಿ!
ನಾ ಸೊರಗಿ!
ಕಾಯುತಿರುವೆ ನಾ..
ನಿನ್ನ ಕನ್ನಡಿಯಂತ ಕಣ್ಣಂಚಲಿ ನಾ..
ಅಡಗಿರುವೆ ನಾ!