Hands up lyrics ( kannada ) – Avane srimannarayana – super cine lyrics

Hans up – Vijay Prakash , Shashank , Pancham jeeva , Chathan naik Lyrics

Singer Vijay Prakash , Shashank , Pancham jeeva , Chathan naik
Music B Ajaneesh loknath
Song Writer Nagarjun Sharma

ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ..
ತೀರ ಹಠ..
ಗುರಿ ಬೆನ್ನಟ್ಟೋ ನೇತಾರನು!

ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು

ಹ್ಯಾಂಡ್ಸ್ ಅಪ್..
ಅದು ಅನವರತ!
ಹ್ಯಾಂಡ್ಸ್ ಅಪ್..
ನಾ ಅಜ್ಞಾತ!
ಹ್ಯಾಂಡ್ಸ್ ಅಪ್..
ಇದೆ ವೇದಾಂತ..!

ಇದು ಚರಿತ್ರೆ ಸೃಷ್ಟಿಸೋ ಅವತಾರ..

ರಂಗೇರಿದೆ ಮಾಯಾ ಜಾಲ
ಅನುಭವಿಸು ಓ ಪ್ರೇಕ್ಷಕನೇ!
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ!
ನನ್ನ ಗೆಲ್ಬೋದು ಅನ್ನುತ
ನಿಂದನು ಓರ್ವ ರಾಕ್ಷಸ!
ತಪ್ಪಲ್ಲ ಆದರು ಅದುವೇ
ಊಹೆಗೂ ಮೀರಿದ ಸಾಹಸ!
ಅನಿಸುತ್ತೆ..
ಬಂದ ಹಾಗಿದೆ ರಚಿಸಲು ಹೊಸದೇ ಶಾಸನ!
ಮೆರಯಲಿ ಗಗನದಲಿ ನಿಮ್ಮದೇ ಲಾಂಛನ..
ಯುಧ್ಧ ಮಾಡಬೇಕು, ಓಡಬಾರದು
ಕಟುಕರ ಮುಂದೆ, ಭಗವದ್ಗೀತೆ!

ಇದು ಚರಿತ್ರೆ ಸೃಷ್ಟಿಸೋ ಅವತಾರ..

ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಕು ದಿಕ್ಕಿನಲು ಬೇಕಿವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ..
ತೀರ ಹಠ..
ಗುರಿ ಬೆನ್ನಟ್ಟೋ ನೇತಾರನು!

ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನ ಹೆಸರು

ಹ್ಯಾಂಡ್ಸ್ ಅಪ್..
ಅದು ಅನವರತ!
ಹ್ಯಾಂಡ್ಸ್ ಅಪ್..
ನೀ ಅಜ್ಞಾತ!
ಹ್ಯಾಂಡ್ಸ್ ಅಪ್..
ಇದೆ ವೇದಾಂತ..!

ಇದು ಚರಿತ್ರೆ ಸೃಷ್ಟಿಸೋ ಅವತಾರ..

Leave a Comment

Contact Us