Neene yendigu – Nihal Tauro Lyrics
Singer | Nihal Tauro |
About the song
▪ Movie : Love mocktail
▪ Music: Raghu Dixit
▪ Lyrics: Raghavendra V Kamath
▪ Singers: Nihal Tauro
▪ Writer-Director: Darling Krishna
Lyrics:
ಈ ಕನಸಲಿ ದಿನವು ಸುರಿಸಿದೆ ಒಲವು ನಗುತಲೀ ನೀನೂ
ಈ ಮನಸಲೀ ನಲಿವು ಬದುಕಲೀ ಗೆಲುವು ತರುತಲೀ ನೀನೂ
ಉಸಿರೇ ನನದಾಗಿ ನೀನಿರುವಾ ಹಾಗೇ
ಕೊರಳ ದನಿಯಾಗಿ ನನ್ನ ಹಾಡಾಗುವೇ
ನನ್ನ ಸ್ನೇಹ ನನ್ನ ಪ್ರೇಮಾ ನನ್ನ ಪ್ರೀತಿ ನೀನೇ
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ……. ಎಂದಿಗೂ….
ಈ ಒಡಲಲೀ ಮಿಡಿತ ಹೃದಯದ ಬಡಿತ ತುಡಿತವೂ ನೀನೂ
ಈ ಎದೆಯಲೀ ಸೆಳೆತ ಒಲವಿನ ಮೊರೆತ ಸ್ಮರಣೆಯು ನೀನೂ
ಒಲವೇ ವರವಾಗಿ ಬಂದಿರುವಾ ಹಾಗೆ
ಜನುಮ ನನದೆಲ್ಲ ನಿನದಾಗಿದೆ
ನನ್ನ ಸ್ನೇಹ ನನ್ನ ಪ್ರೇಮಾ ನನ್ನ ಪ್ರೀತೀ ನೀನೇ
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ….. ಎಂದಿಗೂ…
ನೋವಿಗೆ ನಗುವ ತರುವೇ ನೀನು
ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಹರಿವು ನೀನೂ
ನೀನಾಗಿರುವೆ ನನ್ನಾ ನಿಲುವೂ…
ನನ್ನ ಪ್ರೀತೀ ನನ್ನ ಕೀರ್ತಿ ಮನಃ ಶಾಂತಿ ನೀನೇ
ನನ್ನ ಧೈರ್ಯ ನನಸ್ಥೈರ್ಯ ಐಶ್ವರ್ಯವು ನೀನೇ……. ಎಂದಿಗೂ….
ನನ್ನ ಮಾನ ನನ್ನ ಪ್ರಾಣ ಸನ್ಮಾನ ನೀನೇ
ನನ್ನ ಮೌನ ನನ್ನ ಧ್ಯಾನ ಸನ್ಮಾರ್ಗ ನೀನೇ….. ಎಂದಿಗೂ