Nee thoreda ghaligeyali song details
- Song : Nee thoreda ghaligeyali
- Singer : Ananya bhat, Udit Haritas
- Lyrics : Raghu shashtry
- Movie : Lucia
- Music : Poornachandra Tejaswi S V
- Label : Anand audio
Nee thoreda ghaligeyali lyrics in kannada
ನೀ ತೊರೆದ ಘಳಿಗೆಯಲಿ
ನನ್ನೆದೆಯ ತುಂಬ ನಿನ್ನ ಗುರುತು
ನೆನಪುಗಳ ಮಳಿಗೆಯಲಿ
ಇನ್ನಾರು ಇಲ್ಲ ನಿನ್ನ ಹೊರತು
ಒಂಟಿ ಮೋಡದ ಕಣ್ಣ ಹನಿಯ
ದೂರದಿಂದಲೆ ನೋಡು ಇನಿಯ
ಕಾಣದಿದ್ದರೂ ಕಾಡುತಿರುವ
ಕೇಳದಿದ್ದರೂ ಹೇಳುತ್ತಿರುವ
ಹೃದಯದ ತಾಳಕೆ
ಹಾಡುತಿರುವ, ಹಾಡುತಿರುವ
ನೀ ಯಾರೊ ಯಾರೊ ಯಾರೊ
ಈ ಪ್ರೀತಿಯೆ ಮಾಯೆ,ನಗುವಾಗಲೂ ನೋವೇ
ಏಕಾಂತದ ಛಾಯೆ, ಹಗಲಿರುಳು ಕಾಡಿದೆ
ಮೊದಲೇ, ರಗಳೆ, ಪ್ರೀತಿ ಪದವೆ
ಎಂದಿಗೆ, ಬರುವೆಯೋ, ತಿಳಿಯದೇ ನನ್ನೆದೆ
ಹೃದಯದ ಬಡಿತವೇ ನಿಂತಂತಾಗಿದೆ
ನೀನು ಮರೆಯಾದ ಮರುಘಳಿಗೆ
ಮನಸು ಬಯಸಿದೆ ಸಾನಿಧ್ಯ
ಮತ್ತೆ ಸೇರಲು ನಿನ್ನೊಳಗೆ
ರಾಜಿಯಾಗುತಿದೆ ಆಂತರ್ಯ
ನಾವಿಕನಿಲ್ಲದ ದೋಣಿಯಿದು
ಒಂಟಿ ಸಾಗುವ ಯಾತನೆಯು
ನೆರಳನು ಹಿಡಿಯುವ ಆಟವಿದು
ಇನ್ನು ಸಾಕೆನುವ ಪ್ರಾರ್ಥನೆಯು
ನೀ ಮಾಯೆಯೊಳಗೊ, ಮಾಯೆ ನಿನ್ನೊಳಗೊ
ನೀ ದೇಹದೊಳಗೊ, ದೇಹ ನಿನ್ನೊಳಗೊ
ಮನಸು ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ
ನೀ ಕನಸಿನೊಳಗೊ, ಕನಸು ನಿನ್ನೊಳಗೊ
ನೀ ಅಮಲಿನೊಳಗೊ, ಅಮಲು ನಿನ್ನೊಳಗೊ
ಅಮಲಿನಲ್ಲಿ ಕಂಡಾ ಕನಸಿನಲ್ಲು ಸಿಗುವಾ ಪ್ರೀತಿ ಸೋಲಿನೊಳಗೋ