Nan Raja song details :
- Song : Nan Raja
- Singer : Sangeetha Rajeev
- Lyrics : Varadaraj Chikkaballapura
- Music : Sangeetha Rajeev
Nan Raja lyrics in kannada
ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ..
ಮನಸೈತಿ ನಿನ ಮ್ಯಾಗ ನನ ಗೆಳೆಯ ಕೇಳಯ್ಯಾ..
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ..
ನೀ.. ಕನಸಿನ್ಯಾಗ ಬಂದೀಯೋ
ಈ.. ಮನಸಿನ್ಯಾಗ ಕುಂತೀಯೋ
ನೀ.. ಹಣೀಗ ಮುತ್ತನಿಟ್ಟೀಯೋ..
ಈ.. ಹುಡುಗಿ ನಿದ್ದೆ ಕದ್ದೀಯೋ..
ಹೊಟ್ಟಿ ಹಸಿವೆ ಆಗುತಿಲ್ಲೊ ಗೆಳೆಯ
ನಿದ್ದಿ ಗಿದ್ದಿ ಹತ್ತಾಂಗಿಲ್ಲೊ ಗೆಳೆಯ..
ನಿನ್ನ ಚಿಂತಿಯಾಗೆ ನಾನು
ದವಾಖಾನೆ ಸೇರಂಗಾತು
ಪ್ಯಾರು ಜ್ವರ ಬರಾಂಗಾತು ಗೆಳೆಯ..
ಗಟ್ಟಿ ಮುಟ್ಟು ಆಳು ನೀನು ಗೆಳೆಯ..
ತಾಳಿಕೊಂಡು ಬಾಳುತೀನೊ ಕೇಳಯ್ಯಾ
ಅಂದ ಚಂದ ಎಲ್ಲ ನಿಂದೆ..
ನಿನ್ನ ಹಿಂದಿ ನಾನು ಬಂದೆ
ನನ್ನ ಬಿಟ್ಟು ಹೋಗಬ್ಯಾಡೊ ಗೆಳೆಯ..
ನೀ.. ಕನಸಿನ್ಯಾಗ ಬಂದೀಯೋ
ಈ.. ಮನಸಿನ್ಯಾಗ ಕುಂತೀಯೋ
ನೀ.. ಹಣೀಗ ಮುತ್ತನಿಟ್ಟೀಯೋ..
ಈ.. ಹುಡುಗಿ ನಿದ್ದೆ ಕದ್ದೀಯೋ..
ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ..
ಮನಸೈತಿ ನಿನ ಮ್ಯಾಗ ನನ ಗುಟ್ಟು ಕೇಳಯ್ಯಾ..
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ..
ಜೋಡೆತ್ತಿನ ಬಂಡಿ ತಾರೊ ಗೆಳೆಯ..
ನಾನು ಹತ್ತಿ ಬರಲಿಕ್ಕೈತೊ ಗೆಳೆಯ..
ನಿನ್ನ ಜೋಡಿ ಕುಂತುಕೊಂಡು..
ಶೇಂಗಾ ಬೆಲ್ಲ ತಿನಿಸಿಕೊಂಡು..
ಮುತ್ತನೊಂದು ಕೊಟ್ಟು ಗೆಳೆಯ..
ಒಡವಿ ಗಿಡವಿ ಏನೂ ಬ್ಯಾಡೊ ಕೇಳಯ್ಯಾ..
ತಾಳಿ ಒಂದ ಕಟ್ಟು ಸಾಕು ಗೆಳೆಯ..
ಇಂಥ ಒಳ್ಳಿ ಹುಡುಗಿ ನೀನು..
ಹುಡುಕಿದರೂ ಸಿಗಾಂಗಿಲ್ಲ..
ಲಗೂನ ಲಗನ ಆಗು ಬಾರೊ ಗೆಳೆಯ..
ನೀ.. ಕನಸಿನ್ಯಾಗ ಬಂದೀಯೋ
ಈ.. ಮನಸಿನ್ಯಾಗ ಕುಂತೀಯೋ
ನೀ.. ಹಣೀಗ ಮುತ್ತನಿಟ್ಟೀಯೋ..
ಈ.. ಹುಡುಗಿ ನಿದ್ದೆ ಕದ್ದೀಯೋ..
ನನ್ನಾಣಿ ನಿನ್ ರಾಣಿ ನಾನೇನೆ ಕೇಳಯ್ಯಾ
ಸ್ವಾದ್ರತ್ತಿ ಮಗಳಂಥ ಪ್ರೀತಿ ತೋರಯ್ಯಾ..
ಮನಸೈತಿ ನಿನ ಮ್ಯಾಗ ನನ ಗುಟ್ಟು ಕೇಳಯ್ಯಾ..
ನಾ ಎದರಾಗ ಕಮ್ಮಿ ಇವ್ನಿ ನೀನೆ ಏಳಯ್ಯಾ..