Mauni nannu song details :
- Song : Mauni nannu
- Singer : Karthik
- Lyrics : Kaviraj
- Movie : Suryakanti
- Music : Ilayaraja
- Label : Anand audio
Mauni nannu lyrics in kannada
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮಾನಸಾಂತರ ಮಗು
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೆನೋ ತಿಳಿಯೆನು
ನನ್ನ ನಿನ್ನ ಬಂದವೇನು ಅರಿಯೆನು ಒಹ್ ಒಹ್
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
supercinelyrics.com
ತೇಲಿ ಬಂದ ಸವಿ ಸೋನೇ ನೀನು
ಕಲ್ಲಿನಂತ ಹೃದಯದಲ್ಲಿ ಹೂವ ಬೆಳೆಸಿದೆ.
ಮೋಡವಿರದ ಸುಡು ಭಾನೂ ನಾನು
ಮಳೆಯಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ಈ ನನ್ನ ಒಲವಿನೂರಿಗೆ
ಇಳಿದೆ ನೀ ಈ ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸ್ಸುಂಟು ಎಂದು
ಅರಿವಾಗಿರೋದು ಇಂದು ನನಗೆ ನಿನ್ನಿಂದ
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ನೂರು ಸಾರಿ ನಿನ್ನ ನೋಡಿ ನೋಡಿ
ತಿರುಗಿ ತಿರುಗಿ ನೋಡೋ ಆಸೆ ನನ್ನ ಕಾಡಿದೆ
ನಾವು ಸೇರಿ ನಡೆವಾಗ ದಾರಿ
ಎಂದು ಎಲ್ಲೋ ಮುಗಿಯಬಾರದೆಂದು ಅನಿಸಿದೆ
ಕನಸೇ ನೀ ಬಾ ನನ್ನ ಹೃದಯ ತುಂಬಿಕೊ
ಸೊಗಸೇ ನೀ ಬಾ ನನ್ನ ಬದುಕ ಸೇರಿಕೋ
ನನ್ನ ನಾನೇ ಮರೆವಂತೆ ಮಾಡೋ
ನಿನದೆಂತ ಮೋಡಿ ನನ್ನ ತುಂಬಾ ನೀನೆ ಒಹ್ ಒಹ್
ಮೌನಿ ನಾನು ನುಡಿವಾಗ ನೀನು
ಧ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೆನೋ ತಿಳಿಯೆನು
ನನ್ನ ನಿನ್ನ ಬಂದವೇನು ಅರಿಯೆನು ಒಹ್ ಒಹ್
ಧ್ಯಾನಿ ನಾನು ನನ್ನ ದೇವಿ ನೀನು
supercinelyrics.com