Matinalli Helalarenu song details :
- Song : Matinalli Helalarenu
- Singer : Sonu Nigam
- Lyrics : Jayanth Kaikine
- Movie : Bombat
- Music : Mano Murthy
- Label : Lahari music
Matinalli Helalarenu lyrics in kannada :
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಕಣ್ಣಲ್ಲಿದೆ ಆ ಕಣ್ಣಲ್ಲಿದೆ
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ ಅಹಾ ಇನ್ನೆಲ್ಲಿದೆ
ಹೂಮನಸಿನ ಆ ಮಧುಗುಂಜನ
ಬೇರೆ ಏನು ಕಾಣಲಾರೆ
ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ನಗೆಯಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ
ತಲೆ ಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ
ಅಳಿಸದಂತ ಗಂಧವಾಗಿ
ಮೊದಲಬಾರಿ ಕಂಡ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು
ದಯಮಾಡಿ ಪತ್ತೆ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ