Mareyalaguthilla lyrics ( ಕನ್ನಡ ) – Sadwini Koppa , Vishal Thimmaiah

Mareyalaguthilla song details

  • Song : Mareyalaguthilla
  • Singer : Sadwini Koppa , Vishal Thimmaiah
  • Music : X Vibes
  • Lyrics : Rakeshsubramani , Mani B
  • Label : A2 music

Mareyalaguthilla lyrics in Kannada

ಮರೆಯಲಾಗುತ್ತಿಲ್ಲ ಸಾಂಗ್ ಲಿರಿಕ್ಸ್

ಈ ನನ್ನ ಕನಸು ನನಸಾಗಿರಲು ನೀ ಕಾರಣ
ತುಟಿಯಂಚಲಿ ನಗೆಯನು ಬೀರಲು ನೀ ಕಾರಣ
ಮರೆಯಾಗಲು ಪ್ರೀತಿಯ ಬೆಸುಗೆ ನೀ ಕಾರಣ
ಮನಸ್ಸು ಮೌನವ ಮುರಿಯುತಿದೆ
ನಿನ್ನ ನೋಡಲು ಬಯಸುತಿದೆ
ಹೃದಯ ಬಡಿತವ ನಿಲ್ಲಿಸದೆ
ಕಣ್ಣ ರೆಪ್ಪೆಯ ಮುಚ್ಚಿಸದೆ
ನಿನ್ನಿಂದ ಬದುಕಿದೆ
ಈ ನನ್ನ ಜೀವ
ನೀ ತಂದ ನಗುವಲ್ಲಿ
ಮರೆತಿದೆ ನೋವ
ನೀ ದೂರ ಹೋದರೆ ಅಳುವುದು ಮನಸ್ಸು
ನೀ ಇಲ್ಲವಾದರೆ

ನಿನ್ನನ್ನು ಮರೆಯಲಾಗುತಿಲ್ಲ
ನೋವನು ತಡೆಯಲಾಗುತಿಲ್ಲ
ಮೌನ ಮುರಿಯುತಿಲ್ಲ
ನೀ ಇಲ್ಲದೆ ಬದುಕಲಾಗುತಿಲ್ಲ
ಕಣ್ಣ ಮುಚ್ಚಿ ಕುಳಿತೆ ನಾನು
ಎದುರಲ್ಲಿ ಬಂದು ನಿಂತೆ ನೀನು
ಪ್ರೀತಿ ನಂಬಿ ಬಂದೆ
ನೀನು ಮೋಸ ಮಾಡಿ ಹೋದೆ
ಜೀವ ಹೂವಾಗಿದೆ
ಜೀವ ಹೂವಾಗಿದೆ

ನಾನು ನೋಡೋದಕ್ಕೆ ಮಾತ್ರ ಒರಟ ಕಣೆ
ನನ್ನ ಮನಸ್ಸು ತುಂಬಾನೆ ಮೃದುವು ಕಣೆ
ನನ್ನ ಪ್ರೀತಿಯ ಗೊಂಬೆಯು ನೀನೆ ಕಣೆ
ನೀನಿಲ್ಲದ ಪ್ರೀತಿಯು ಬೇಡ ಕಣೆ

ಓ ನನ್ನ ಪ್ರೇಯಸಿ ತಬ್ಬಿಕೊಳ್ಳೋ ರಾಕ್ಷಸಿ
ನಗುವಲ್ಲೇ ಕಾಡಿಕೊಳ್ಳೊ ನೀ ನನ್ನ ಮೋಹಿನಿ
ನೀ ನನ್ನ ಕಣ್ಮಣಿ ನನ್ನ ಕನಸಿನ ರಾಣಿ ನೀ
ನಿನ್ನಿಂದ ಹುಟ್ಟುತಿದೆ ಕಣ್ಣಲ್ಲಿ ಇಬ್ಬನಿ
ಕನಸಲ್ಲೂ ನನಸಲ್ಲೂ ನನ್ನ ಜೊತೆಗೆ ಇರುವೆ ನೀ
ನಗುವಲೂ ಅಳುವಲ್ಲೂ ನಿನ್ನ ಜೊತೆಗೆ ಇರುವೆ ನಾ
ನಿನ್ನ ಉಸಿರು ನಾನೆ ನಾನೆ
ನನ್ನ ಉಸಿರು ನೀನೆ

ನಿನ್ನನ್ನು ಮರೆಯಲಾಗುತಿಲ್ಲ
ನೋವನು ತಡೆಯಲಾಗುತಿಲ್ಲ
ಮೌನ ಮುರಿಯುತಿಲ್ಲ
ನೀ ಇಲ್ಲದೆ ಬದುಕಲಾಗುತಿಲ್ಲ
ಕಣ್ಣ ಮುಚ್ಚಿ ಕುಳಿತೆ ನಾನು
ಎದುರಲ್ಲಿ ಬಂದು ನಿಂತೆ ನೀನು
ಪ್ರೀತಿ ನಂಬಿ ಬಂದೆ
ನೀನು ಮೋಸ ಮಾಡಿ ಹೋದೆ

ಜೀವವೆ ನೀ ನನ್ನ ಮರೆತರೆ
ಇರುವುದೇ ಈ ನನ್ನ ಜೀವನ
ನಿನ್ನಿಂದ ದೂರವೇ ಹೋಗದೆ ಜೀವ ಸಂಗಾತಿಯಾಗುವೆ
ನಿನ್ನ ಜೀವನ ಕಥೆಗೆ ಜೊತೆಯಾಗಿಯೇ ಇರುವೆ
ನಿನ್ನ ಭಾವನೆಗಳಿಗೆ ನಾನು ನಿನಗಾಗಿಯೇ ನೆರಳಾಗುವೆ
ನಿನಗಾಗಿಯೇ ನಗುವಾಗುವೆ ನಾ
ಕಣ್ಣಿನಲ್ಲಿ ಕೊಲ್ಲುವೆ ನನ್ನ ಕನಸಿನಲ್ಲಿ ಕಾಡುವೆ

ಆ ನಿನ್ನ ಮಾತು ಸಾಕು ಬೇರೆ ಏನೂ ಬೇಡ
ನಾನು ಅವಳಿಗಾಗಿ ಕಾದಿದ್ದೆ
ಪಾರ್ಕಿನಲ್ಲಿ ಮಾಲಿನಲ್ಲಿ ರೋಡಿನಲ್ಲಿ ಒಬ್ಬನೇ ಅಂದು
ಇನ್ನೇನು ಬೇಕು ಮಧ್ಯರಾತ್ರಿ ಬಂದಾಯ್ತು ಕನಸುಗಳು ಶುರುವಾಯ್ತು
ದೇವತೆ ನೀನು ನನ್ನ ಕನಸಲ್ಲಿ ಎಷ್ಟು ಚೆನ್ನ
ಇನ್ನೂ ನೂರು ಜನ್ಮ ಒಂದಾಗಿ ಸೇರಿ ಬಾಳುವಾಸೆ
ಎಂದೂ ಕಮ್ಮಿ ಆಗೋದಿಲ್ಲ ನಿನ್ನ ಮೇಲೆ ಇಷ್ಟ ಅಂತ ಹೇಳೋಕೆ ಬಂದರೆ
ಕಷ್ಟ ಕೊಟ್ಟು ತಳ್ಳಿ ಹೋದೆ
ಇಷ್ಟ ಆದ್ರೆ ಟೇಕ್ ಕೇರ್
ಕಷ್ಟ ಆದ್ರೆ ಡೋಂಟ್ ಕೇರ್
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ನನ್ನ ಪ್ರೀತಿಗೆ ಜೀವ ಕೊಟ್ಟು
ಪೊಗರು ಹುಡುಗಿ ನನ್ನ ಬಿಟ್ಟು ಹೋಗಬೇಡ
ನೋವ ಕೊಟ್ಟು ಜೊತೆಗೆ ಬಾರೆ ನಂಬಿಕೆ ಇಟ್ಟು
ನೋಡ್ಕೊತೀನಿ ಪ್ರಾಣ ಕೊಟ್ಟು

ನಿನ್ನನ್ನು ಮರೆಯಲಾಗುತಿಲ್ಲ
ನೋವನು ತಡೆಯಲಾಗುತಿಲ್ಲ
ಮೌನ ಮುರಿಯುತಿಲ್ಲ
ನೀ ಇಲ್ಲದೆ ಬದುಕಲಾಗುತಿಲ್ಲ
ದೇವರ ಬಳಿಯು ಹೋದೆ ನಾನು
ನಿನ್ನ ಮನ ತುಂಬಲೇನು
ಪ್ರೀತಿ ಬರಲು ಎಂದು
ಇಂದು ಬೇಡುತಿರುವೆ ನಾನು

Mareyalaguthilla song video :

2 thoughts on “Mareyalaguthilla lyrics ( ಕನ್ನಡ ) – Sadwini Koppa , Vishal Thimmaiah”

Leave a Comment

Contact Us