Manase baduku ninagagi song details
- Song : Manase baduku ninagagi
- Singer : S P Balasubhramanya
- Lyrics : K Kalyan
- Movie : Amruthavarshini
- Music : Deva
- Label : Lahari music
Manase baduku ninagagi lyrics in Kannada
ಮನಸೇ…
ಬದುಕು ನಿನಗಾಗಿ, ಬವಣೆ ನಿನಗಾಗಿ,
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?
ಮನಸೇ, ಮನಸೇ.
ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ?
ನಿನ್ನ ಒಂದು ಆಣತಿ ಸಾಕು, ನಾ ಅಡಿಗಳಲ್ಲಿ.
ನಿನ್ನ ಒಂದು ಹೆಸರೇ ಸಾಕು, ಹುಸಿರಾಟಕಿಲ್ಲಿ.
ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ.
ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ?
ಮನಸೇ ಮನಸ ಕ್ಷಮಿಸೆ.
ನನ್ನ ಪ್ರೀತಿ ಗಂಗೆ ನೀನು, ಮುಡಿಸೇರಲೆಂದೇ.
ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ.
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ.
ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ?
ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ?
ಮನಸೇ ಮನಸ ಹರಿಸೆ.
ಮನಸೇ….,
ಈ ಬದುಕು ನಿನಗಾಗಿ, ಬವಣೆ ನಿನಗಾಗಿ,
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?