Malebille lyrics ( ಕನ್ನಡ ) – Drishya 2

Malebille song details

  • Song : Malebille
  • Singer : Haricharan
  • Lyrics : Anup Bhandari
  • Movie : Drishya 2
  • Music : B Ajaneesh Loknath
  • Label : Zee music

Malebille lyrics in kannada

ಮಳೆಬಿಲ್ಲೆ ಸಾಂಗ್ ಲಿರಿಕ್ಸ್

ಮಳೆಬಿಲ್ಲೆ ಮರೆಯಾಗುವೆ ನೀ ಏಕೆ
ಮುಗಿಲಲ್ಲೆ ಸೆರೆಯಾಗುವೆ ಹೀಗೇಕೆ
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಸೂರಾಗಿ ಇರುವಂತೆ ಭೂಮಿಗೆ ಭಾನು
ಸುಡುವ ಬೇಗೆ ಇರಲಿ ಇನ್ನೂ
ನೆರಳಾಗಿ ನಾ ಕಾಯುವೆ ನಿನ್ನ
ಮಳೆಬಿಲ್ಲೆ ಮರೆಯಾಗುವೆ ನೀ ಏಕೆ

ಮಾತು ಬರದಿರುವ ಕಂಡ ಕವಿ
ಆಗ ಆಡೋ ನುಡಿ ಅಮ್ಮ ತಿಳಿ
ತಂದೆಯ ಕೆನ್ನೆಯ ಮೇಲಿಟ್ಟ ಸಹಿ
ಮುತ್ತು ಅವನ ಇಡೀ ಬಾಳಿನ ನಿಧಿ

ಮೊದಲ ಹೆಜ್ಜೆಯ ನೀ ಇಟ್ಟಾಗಲು
ನಿನಗೆ ನಾವಿಬ್ಬರೆ ಕಾವಲು
ಎಡವೋದು ಸಹಜ
ನೀ ಎಲ್ಲ ಭಯವ ಬಿಡು

ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಅಲೆಯು ತೀರವ ಸೇರಿ ಮಲಗುವ ಹಾಗೆ
ಮಡಿದ ಮೇಲೆ ಮಲಗು ನೀನು
ನೆರಳಾಗಿ ನಾ ಕಾಯುವೆ ನಿನ್ನ
ಮಳೆಬಿಲ್ಲೆ ಮರೆಯಾಗುವೆ ನೀ ಏಕೆ

ಯಾರು ತಿಳಿದೋರು ತಪ್ಪು ಸರಿ
ಇದು ಎಲ್ಲ ಬರಿ ವಿಧಿಯ ಸಹಿ
ಬಾಳಲಿ ಹಂಚುವುದು ಕೊಂಚ ಸಿಹಿ
ಇನ್ನೆಲ್ಲಾ ಕಹಿ ಇದು ಅವನ ಪರಿ

ಸಿಗಲಿಲ್ಲ ಯಾವ ದೇವರು
ಗುಡಿಯಿಂದ ಗುಡಿಗೆ ಹೋದರೂ
ನಿನಗೂ ನಾನು ನನಗೆ ನೀನು ಇನ್ನೆನಾದರೂ

ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಚಂದ್ರ ಕತ್ತಲೆಯಲ್ಲೆ ಮೂಡುವ ಹಾಗೆ
ನನ್ನ ಬಾಳ ಬೆಳಗು ನೀನು
ಇರುಳಲ್ಲೂ ನಾ ಕಾಯುವೆ ನಿನ್ನ

ಮಳೆಬಿಲ್ಲೆ ಮರೆಯಾಗುವೆ ನೀ ಏಕೆ
ಮುಗಿಲಲ್ಲೆ ಸೆರೆಯಾಗುವೆ ಹೀಗೇಕೆ

Malebille song video :

Leave a Comment

Contact Us