Malavalli mavane magale song details :
Song | Malavalli mavane magale |
Singers | Kailash Kher, Santosh Venky, Sony Komanduri |
Lyrics | Kaviraj |
Movie | Odeya |
Music | Arjun Janya |
Label | Anand Audio |
Malavalli mavane magale song lyrics in Kannada :
ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್
ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್
ಸಾಹೋ ಸಾಹೋ ಸಾಹೋ ಸಾಹೋರೆ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ನಮ್ಮದೇ ಹುಡುಗಿ ರೇಷ್ಮೆ ಸೀರೆ ಉಟ್ಟರೆ
ಹೆಂಗಿದೆ ಅಂತ ಸನ್ನೆ ಮಾಡಿ ಬಿಟ್ಟರೆ
ಬಡಪಾಯಿ ಈ ಜೀವ
ತಡ್ಕೊಳ್ಳೋದ್ ಹೆಂಗ್ ಹೇಳ್ರಪ್ಪೋ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್
ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್
ಸಾಹೋ ಸಾಹೋ ಸಾಹೋ ಸಾಹೋರೆ
ತೇರು ನೋಡುತ್ತಿಲ್ಲ
ಯಾಕೋ ನನ್ನೇ ನೋಡುತಿಯ
ತೇರಿಗಿನ್ನ ನೀನೆ ತುಂಬಾ ಚೆನ್ನಾಗಿ ಕಾಣುತೀಯ
ಗುಂಪಿನಲ್ಲಿ ಯಾಕೆ
ಹಿಂಗೆ ತಂಟೆ ಮಾಡುತೀಯ
ಸುಮ್ಮನೆ ಇದ್ದರೆ ಕಣ್ಣಿನಲ್ಲೇ ಕೊಲ್ಲುತೀಯ
ಮಾವನ ಮಗನೆ..
ಮಳವಳ್ಳಿ ಮಾವನ ಮಗನೆ..
ಎಷ್ಟು ಚೆಂದ ಎಲ್ಲ ಮಾಯಾ
ಆಗಿಬಿಟ್ಟರೆ
ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೇ
ಟೆಂಟಿನಲ್ಲಿ ಅ೦ಟಿ ಕೂತು ಮ್ಯಾಟನಿ ಪಿಚ್ಚರು
ಹಾಯಾಗಿ ನೋಡೋನ್ ಬಾರೆ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಮುತ್ತಿನ೦ತ ಅಳಿಯ ಸಿಕ್ಕ
ನಮ್ಮ ಊರಿಗೊಬ್ಬ
ಚಂದವಾಯ್ತು ನೀನು ಬಂದು
ನಮ್ಮ ಊರ ಹಬ್ಬ
ಬೀದಿಗೆಲ್ಲ ಕಟ್ಟಿ
ಜಲ್ಲಿ ಕಬ್ಬು ಬಾಲೆ ಕಂಬ
ಸ್ವಾಗತ ಕೋರುತ
ಆರತಿಯ ಎತ್ತು ಬಾ
ನಮ್ಮೂರ ಒಡೆಯ
ನೀನಿನ್ನೂ ನಮ್ಮೂರ ಒಡೆಯ
ನಿಮ್ಮ ಪ್ರೀತಿ ಕಂಡು ನಾನು
ಧನ್ಯನಾದೆನು
ನಾನು ಬೇರೆಯಲ್ಲ ಇನ್ನು
ನಿಮ್ಮಲ್ಲೋಬ್ಬನು
ಪ್ರಾಣ ಇರುವ ತನಕ ಎಂದು
ಮರೆಯಲಾರೆನು
ಈ ನಿಮ್ಮ ಅಭಿಮಾನವ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ