Kannina notagalu song details
- Song : Kannina notagalu
- Singer : S P Balasubhramanya
- Lyrics : K Kalyan
- Movie : Amruthavarshini
- Music : Deva
Kannina notagalu lyrics in Kannada
ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು
ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು
ಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳು
ಕಣ್ಣಿನ ಹಾಡುಗಳು ತಿರು ಗಿರುಗಿಸೋ ರಾಟೆಗಳು
ಇಂಥೋಳ ಕಣ್ಣಿನಲಿ ನಾನು
ಸೇರಿಕೊಳ್ಳಲೇ, ಹಾಡಿಕೊಳ್ಳಲೇ
ಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ
ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು
ಕಣ್ಣಿನ ಮಾತುಗಳು, ಬಿಡಿಸ್ಹೇಳದ ಒಗಟುಗಳು
ಸಾ ಸ ಸಾ ಸ ಸ ಸ, ನಿ ಸ ದ ನಿ ಪ ದ ಮ ಪ
ನೀ ನಿ ನೀ ನಿ ನಿ ನಿ, ಸ ರಿ ನಿ ಸ ದ ನಿ ಪ ದ
ಗಾ ಗ ಗಾ ಗ ಗ ಗ, ಗ ಮ ರಿ ಗ ಸ ರಿ ನಿ ಸ
ಪ ದ ನಿ ಸ ರೀ, ಮ ಪ ದ ನಿ ಸ, ಗ ಮ ಪ ದ
ಸಾ ನಿ ದ, ರೀ ಸಾ ನಿ, ಗಾ ರಿ ಸ, ನಿ ದ ನಿ ಸಾ
ಮನಸು
ಓಹ್ ಓಹ್ ಓಹ್ ಜಿಗಿ ಜಿಗಿ ಜಿಗಿಯುವ
ಹಾ ಹಾ ಹಾ ಮಿನು ಮಿನು ಮಿನುಗುವ
ಹೆ ಹೆ ಹೆ ಕಚಗುಳಿ ಕಲಿಸುವ ಹೂ ಮನಸಿದೆ
ಮೈಮೇಲೆ ಹೊಸತನ ತರಿಸುವ
ಉಯ್ಯಾಲೆ ತೂಗಲು ಕಲಿಸುವ
ಸುವ್ವಾಲೆ ಪದಗಳ ಬರೆಸುವ ಹೊಮ್ಮನಸಿದೆ
ಬರಸೆಳೆಯೋ ಒಳಗಿಳಿಯೋ ಚಿಲಿಪಿಲಿಯ ಆಸೆಯಲಿ
ಅರೆಘಳಿಗೆ ಕಾಯದಲೇ ಚಡಪಡಿಸೋ ಪ್ರೀತಿ ಮನಸಿನಲಿ
ಸೇರಿಕೊಳ್ಳಲೇ, ಹಾಡಿಕೊಳ್ಳಲೇ
ಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ
ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು
ಈ ಮನಸಿನ ಮಾತುಗಳು ಕವಿ ಬರೆಯದ ಕವನಗಳು
ಕನಸು
ಹ ಹ ಹ ಅಹಹಹ ಅನಿಸುವ
ಆಕಾಶ ಅಂಗೈಲಿರಿಸುವ
ಹೂಗಾತಿ ಸನಿಹವ ಬಯಸುವ ಹೊಂಗನಸಿದೆ
ಎಲ್ಲೆಲ್ಲು ಚಿಗುರನು ಹುಡುಕುವ
ಏನೆಲ್ಲ ಸೊಗಸನು ಚೆಲ್ಲುವ
ಸಂಗಾತಿ ಬಯಕೆಯ ಬೆಸೆಯುವ ಹಾಲ್ಗನಸಿದೆ
ಕ್ಷಣದೊಳಗೆ ಸೆರೆಹಿಡಿಯೋ ತೆರೆಮರೆಯ ಚೆಲುವಿನಲಿ
ಚೈತ್ರಗಳ ಸೋಲಿಸುವ ಹಾಡುಗಳ ಪ್ರೀತಿ ಕನಸಿನಲಿ
ಸೇರಿಕೊಳ್ಳಲೇ, ಹಾಡಿಕೊಳ್ಳಲೇ
ಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ
ಕಣ್ಣಿನ ನೋಟಗಳು, ಕೋಲ್ಮಿಂಚಿನ ಬಾಣಗಳು
ಮನಸಿನ ಮಾತುಗಳು ಕವಿ ಬರೆಯದ ಕವನಗಳು
ಕನಸಿನ ಹಾಡುಗಳು ಎದೆ ತಣಿಸುವ ಸೂತ್ರಗಳು
ಇಂಥೋಳ ಸನಿಹದಲಿ ನಾನು
ಸೇರಿಕೊಳ್ಳಲೇ, ಹಾಡಿಕೊಳ್ಳಲೇ
ಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ
ಸೇರಿಕೊಳ್ಳಲೇ, ಹಾಡಿಕೊಳ್ಳಲೇ
ಸ್ವರ್ಗ ಇಲ್ಲಿಯೇ, ಕಂಡುಕೊಳ್ಳಲೇ