Kanavarike ninnade lyrics ( ಕನ್ನಡ ) – Arjun gowda

Kanavarike ninnade song details

  • Song : Kanavarike ninnade
  • Singer : Sanjith Hegde
  • Lyrics : Ragvendra kamath
  • Movie : Arjun gowda
  • Music : Dharma Vish
  • Label : Anand audio

Kanavarike ninnade lyrics in kannada

ಕನವರಿಕೆ ನಿನ್ನದೆ ಸಾಂಗ್ ಲಿರಿಕ್ಸ್

ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು

ಇದು ಯಾರ ಕೋಪವೋ
ಇದು ಯಾರ ಶಾಪವೋ
ಕಾಣದೆ ಹೋದೆಯ ನೀನು
ಏಕಾಂಗಿಯಾದೆ ನಾನು

ಹೋ ಕಾಲವೇ ಇದು ನ್ಯಾಯವೇ
ನಿನ್ನಾಟಕೆ ಕೊನೆ ಇಲ್ಲವೆ
ಹಣೆಬರಹಕೆ ಬಲಿಯಾದೆನಾ
ಬದುಕಿದ್ದರೂ ಶವವಾದೆ ನಾ

ಒದರಾಡಿದೆ ಪರದಾಡಿದೆ
ಮಿಡುಕಾಡಿದೆ ಹುಡುಕಾಡಿದೆ
ಇದು ಏತಕೆ ಹೀಗಾಗಿದೆ
ಎದೆಯು ಒಡೆದು ಹೋಳಾಗಿದೆ

ಹಗಲು ಇರುಳು ಒಂದೇ ಸಮನೆ
ಎದೆಬಿಡದ ವೇದನೆ
ನನ್ನ ಕಾಡಿದೆ

ಈ ರೋಗಕೆ ಮದ್ದಿಲ್ಲವೆ
ಉಪಚರಿಸಲು ಬರಬಾರದೆ
ಕಣ್ಣೀರ್ ಇದು ಕಡಲಾಗಿದೆ
ಮನ ಮಸಣದ ಮದುವಾಗಿದೆ

ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು

Kanavarike ninnade song video :

Leave a Comment

Contact Us