Kadalanthe kaadha kannu – Sid Sriram , Aishwarya ravichandran Lyrics
Singer | Sid Sriram , Aishwarya ravichandran |
About the song
▪ Movie: Dear Comrade
▪ Song: Kadalanthe kaadha kannu
▪ Singers: Sid Sriram, Aishwarya Ravichandran
▪ Music: Justin Prabhakaran
▪ Lyrics: Dhananjay Ranjan
Lyrics
ಕಡಲಂತೆ ಕಾದ ಕಣ್ಣು..
ನದಿಯಂತೆ ಓಡುವ ಕನಸು..
ಕಡಲಂತೆ ಕಾದ ಕಣ್ಣು..
ನದಿಯಂತೆ ಓಡುವ ಕನಸು
ಒಂದಾಗಿ ಒಲಿದ ಮೇಲೆ..
ಒಂದಾಗಿ ಒಲಿದ ಮೇಲೆ
ತೀರ ಸೇರೋ ಪ್ರಾಯ..
ವಿರಹದ ಅಂತಿಮ!
ಹೃದಯಕೆ ಸಂಭ್ರಮ!!
ಅಧರದ ಅಂಚಿಗೆ..
ಮಧುರದ ಕೋರಿಕೆ!
ನಿನ್ನ ಮೇಲಿನಾಸೆ
ಎಂದು ಕೊನೆಯಾಗದೆ
ಕೊಂಚ ದೂರ ಆದ್ರೂ ಮನಸು ಅಳುತಲಿದೆ
ಅಪ್ಪಿಕೊಳ್ಳೊ ಬೇಕು ಅನ್ನೊ
ಕಲ್ಪನೆಗೆ
ಕೈಯ ಚಾಚಿ ನಿಲ್ಲು
ಜನುಮ ಸಾಕೆನೆಗೆ
ನೂರಾರು ಕಾಲಕೂ
ನೀ ನನ್ನ ಸ್ವಂತವೆ
ಅತಿಯಾದ ಪ್ರೀತಿಗೆ
ಇದೆ ನನ್ನ ಸ್ತಿತಿ ಗತಿ
ವಿರಹದ ಅಂತಿಮ
ಹೃದಯಕೆ ಸಂಭ್ರಮ
ಅಧರದ ಅಂಚಿಗೆ
ಮಧುರದ ಕೋರಿಕೆ
ಕಡಲಂತೆ ಕಾದ ಕಣ್ಣು
ನದಿಯಂತೆ ಓಡುವ ಕನಸು
ಕಡಲಂತೆ ಕಾದ ಕಣ್ಣು
ನದಿಯಂತೆ ಓಡುವ ಕನಸು
ನನ್ನ ಕಣ್ನ ಕನಸುಗಳು
ನಿನ್ನ ರೂಪ ಬಿಡಿಸುತಿದೆ
ನನ್ನ ಬಾಳ ಬಣ್ಣಿಸು ಬಾ
ಪ್ರೇಯಸಿ
ತುಂಟತನ ಕೆನ್ನೆ ಮೇಲೆ
ಮುತ್ತನಿಟ್ಟಂತೆ
ಮನಸಿನಾಸೆಗೆಲ್ಲ ಪ್ರೀತಿ
ಸಾಲ ಕೊಟ್ಟಂತೆ
ಹೇಗೊ ನಿನ್ನ ಸೇರಿಕೊಳ್ಳೊ
ಆಸೆ ನನ್ನದು
ಅಂತ ಸುಖ ಸಂತಸದ ಸೆಳೆತ ನಿನ್ನದು
ನನ್ನದೆಲ್ಲ ನಿನ್ನದೆ
ನಿನ್ನ ಬಿಟ್ಟು ಏನಿದೆ
ಸಿಹಿಯಾದ ಯಾತನೆ
ಇದಕಿಲ್ಲ ಇತಿ ಮಿತಿ..