Hudugi male billu song details
- Song : Hudugi male billu
- Singer : Karthik , Priya himesh
- Lyrics : Jayanth kaykini
- Movie : Gelaya
- Music : Manomurthy
- Label : Anand audio
Hudugi male billu lyrics in kannada
ಹುಡುಗಿ ಮಳೆಬಿಲ್ಲು ಸಾಂಗ್ ಲಿರಿಕ್ಸ್
ಅವಳ ನೋಟ ಹೂಬಾಣ
ಎದೆಗೆ ನಾಟಿದರೆ
ಸೀದಾ ಸ್ವರ್ಗಕ್ಕೆ ಸೋಪಾನ
ಹುಡುಗ ಅಲೆಮಾರಿ
ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೇ
ಅವನ ಕನಸಿನ ನಿಲ್ದಾಣ
ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸಂತಸದ ಅಲೆಯಲ್ಲಿ ಜಾರದೆಯೆ ಕುಣಿಯೋಣ
ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ
ಅವನ ಆಟ ಜೋಪಾನ
ಕಣ್ಣಲ್ಲಿ ದೀಪವ ಹಚ್ಚುವಿರಿ
ಚಿನ್ನದ ಗರಿಗಳ ಚೆಲುವೆಯಾರೆ
ದೀಪಗಳ ಉತ್ಸವವೆ
ಬಣ್ಣದ ಬಲೆಯನ್ನು ಬೀಸುವಿರಿ
ಮಿಂಚಿನ ಓಟದ ಮೋಹಿತಾರೆ
ಅಷ್ಟೊಂದು ಅವಸರವೆ
ಈ ಸಮಯ ಇನ್ನಿಲ್ಲ
ಇನ್ನೇಕೆ ಬಿಗುಮಾನ
ಈ ಹರೆಯ ಬಾಳು ಜೋರು
ಇರಬೇಕು ಕಡಿವಾಣ
ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಆ ಆ
ಹುಡುಗ ಅಲೆಮಾರಿ
ಅವನ ಆಟ ಜೋಪಾನ ಆ ಆ
ಮುತ್ತಿನ ಸರಗಳ ಖಜಾನೆಗೆ
ನಿಮ್ಮಯ ಬುಟ್ಟಿಯಲ್ಲಿ ಕೀಲಿ ಇದೆ
ಒಂಚೂರು ತೆರೆಯುವಿರ??
ನಮ್ಮಯ ಬಾಳಲ್ಲಿ ಈಗೊಂದು
ಗೆಳೆಯನ ಜಾಗ ಖಾಲಿ ಇದೆ
ಅರ್ಜಿಯನ್ನು ಬರೆಯುವಿರ??
ಈ ಸೆಳೆತ ನಿಮ್ಮಿಂದ ನಾವೇನು ಮಾಡೋಣ
ಈ ಪಾಡು ನಿಮಗಿರಲಿ ಇನ್ನೊಮ್ಮೆ ಸೇರೋಣ
ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಎದೆಗೆ ನಾಟಿದರೆ
ಸೀದಾ ಸ್ವರ್ಗಕ್ಕೆ ಸೋಪಾನ ಹುಡುಗ ಅಲೆಮಾರಿ
ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೇ ಅವನ
ಕನಸಿನ ನಿಲ್ದಾಣ
ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸಂತಸದ ಅಲೆಯಲ್ಲಿ ಜಾರದೆಯೆ ಕುಣಿಯೋಣ
ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ
ಅವನ ಆಟ ಜೋಪಾನ