Chitteya haage song details
- Song : Chitteya haage
- Singer : Anuradha bhat
- Lyrics : Hari Santhosh
- Movie : Iravan
- Music : S Pradeep varma
- Label : Anand audio
Chitteya haage lyrics in kannada
ಚಿಟ್ಟೆಯ ಹಾಗೆ ಸಾಂಗ್ ಲಿರಿಕ್ಸ್
ಚಿಟ್ಟೆಯ ಹಾಗೆ
ನಿನ್ನ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೇ ಮೆಲ್ಲ ನಿನ್ನ ಪ್ರೀತಿನಾ ತಿಳಿಸು
ಎಲ್ಲಂದ್ರಲ್ಲೆ ನಿನ್ನ ಹೆಸರ ನಾ ಗೀಚುವ ಪಾಡು
ಸನ್ನೆಯಲೇ ನಿನ್ನ ಸಿಹಿಯೊಪ್ಪಿಗೆಯ ನೀಡು
ಕಾರಣವೇನು ಈ ಪ್ರೀತಿಗೆ
ನಾ ಸೋತು ಹೋದೆ ನಿನ್ನ ಮಾತಿಗೆ
ಬಾ ಬಂದು ಸೇರು ನನ್ನ ಬಾಳಿಗೆ
ಚಿಟ್ಟೆಯ ಹಾಗೆ
ನಿನ್ನ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೇ ಮೆಲ್ಲ ನಿನ್ನ ಪ್ರೀತಿನಾ ತಿಳಿಸು
ನಾನಿರೊ ಬೀದಿಗೆ ನೀನು ಬಂದರೆ
ನಿನ್ನದೆ ಸ್ಪರ್ಶವೂ ಆದ ಹಾಗಿದೆ
ಕಣ್ಣಲ್ಲೆ ಮೆಲ್ಲನೆ ಎಲ್ಲಾ ಹೇಳುವೆ
ನೋಡಿಯು ಸುಮ್ಮನೆ ಹೇಗೆ ಹೋಗುವೆ
ನಿನಗಾಗಿ ನಿನಗಾಗಿ ನಿನಗಾಗಿ ಇಂದು ನಾನು ಕಾದಿರುವೆ
ಕಾದಿರುವೆ ನಿನ್ನ ದಾರಿನಾ
ಊಟವೂ ಪಾಠವೂ ಬೇಡವಾಗಿದೆ
ನಿನ್ನನ್ನೆ ನೋಡುವ ಆಸೆಯಾಗಿದೆ
ಸಂತೇಲಿ ಎಲ್ಲರೂ ನಿನ್ನ ಹಾಗೆಯೆ ಕಂಡರೆ ನನ್ನದು ತಪ್ಪು ಏನಿದೆ
ಸಂಗಾತಿ ಸಂಗಾತಿ ಸಂಗಾತಿಯಾಗು ಬಾ
ನನ್ನೆಲ್ಲಾ ಕನಸಿಗೆ ಒಡೆಯನಾಗಿ ಬಾ
ಚಿಟ್ಟೆಯ ಹಾಗೆ
ನಿನ್ನ ಹಿಂದೆ ಅಲೆದಾಡಿದೆ ಮನಸ್ಸು
ಕಣ್ಣಲ್ಲೇ ಮೆಲ್ಲ ನಿನ್ನ ಪ್ರೀತಿನಾ ತಿಳಿಸು
ಎಲ್ಲಂದ್ರಲ್ಲೆ ನಿನ್ನ ಹೆಸರ ನಾ ಗೀಚುವ ಪಾಡು
ಸನ್ನೆಯಲೇ ನಿನ್ನ ಸಿಹಿಯೊಪ್ಪಿಗೆಯ ನೀಡು
ಕಾರಣವೇನು ಈ ಪ್ರೀತಿಗೆ
ನಾ ಸೋತು ಹೋದೆ ನಿನ್ನ ಮಾತಿಗೆ
ಬಾ ಬಂದು ಸೇರು ನನ್ನ ಬಾಳಿಗೆ