Categories
Vijay Prakash

Gurugalu namma gurugalu lyrics ( ಕನ್ನಡ ) – Guru Shishyaru

Gurugalu namma gurugalu song details :

  • Song : Gurugalu namma gurugalu
  • Singer : Vijay Prakash
  • Lyrics : Dr V Nagendra Prasad
  • Movie : Guru Shishyaru
  • Music : B Ajneesh Loknath
  • Label : Anand audio

Gurugalu namma gurugalu lyrics in kannada

ಬಳಪಾ ಹಿಡಿದಾ ಭಗವಂತಾ ಇರುತಾನೆ ನಮ್ಮ ಸುತ್ತ
ಅವತಾರ ನಾನಾ ರೂಪವೊ…
ನಮ್ಮೆಲ್ಲ ಹಣೆ ಬರಹಾ ತಿದ್ದೀ ಬರೆಯಲು..
ಕತ್ತಲೆಯಿಂದಾ ಬಾ ಅಂತಾ ನಮ್ಮಾ ಕೈಯ್ಯಾ ಹಿಡಿಯುತ್ತಾ…
ಕರೆದೊಯ್ದಾ.. ಬೆಳಕೂ ತೋರಲು..
ನಯವಾಗಿ ಗದರೋದು ನಮ್ಮ ಬೆಳೆಸಲು…

ಭಾಷೆ ಅಮೃತಾ ಕುಡಿಸೋ ತಾಯಾಗೀ
ಭಾಷೆ ಅಮೃತಾ ಕುಡಿಸೋ ತಾಯಾಗೀ
ಭವಿಷ್ಯ ಬರೆವಂತಾ ತಂದೇನೂ ಆಗೀ
ಭವಿಷ್ಯ ಬರೆವಂತಾ ತಂದೇನೂ ಆಗೀ
ಚೆಂದದಾ ಜೀವನನಾ… ನೀಡಿರೋ…
ಗುರುಗಳು…ನಮ್ಮ ಗುರುಗಳು…

ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

ಬಳಪಾ ಹಿಡಿದಾ ಭಗವಂತಾ ಇರುತಾನೆ ನಮ್ಮ ಸುತ್ತ
ಅವತಾರ ನಾನಾ ರೂಪವೊ…
ನಮ್ಮೆಲ್ಲ ಹಣೆ ಬರಹಾ ತಿದ್ದೀ ಬರೆಯಲು..
supercinelyrics.com

ಬಾಳಲ್ಲಿ ಲೆಕ್ಕ ಎಷ್ಟು ಮುಖ್ಯ ಎಂಬುದಾ
ಬೇರಳಲ್ಲೆ ತೋರಿ ಕಲಿಸಿದಾ ಗುರುಗಳೇ
ಈ ದೇಹ ಹೇಗೆ ದಂಡಿಸೋದು ಎನ್ನುವಾ…
ಸಂದೇಹ ನೀಗೊ ಮೆಚ್ಚಿನ ಕಲಿಗಳೇ..
ಕನ್ನಡಾ… ಕಂಡರೇ.. ಕಣ್ಣಿಗೇ ಒತ್ತಿಕೋ….
ಅಕ್ಷರಾ… ಅಂದರೇ… ಅನ್ನಕ್ಕಿಂತಾ ದೊಡ್ದದೆಂದಾ ಗುರುವೇ…..
ಪ್ರತಿ ಬಾರೀ.. ತಾಳ್ಮೆ ಪಾಠಾ ಕಲಿಸೋರೇ…
ಗುರುಗಳು ನಮ್ಮ ಗುರುಗಳು..

ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

ಇತಿಹಾಸದಲ್ಲಿ ಆದ ತಪ್ಪು ತಿಳಿಸುತಾ
ನಮ್ಮೆಲ್ಲ ನಾಳೆ ರೂಪಿಸೊ ಋಷಿಗಳೆ…
ಭೂಗೋಳದಲ್ಲಿ ಕಕ್ಷೆಯಲ್ಲಿ ತುಂಬಿದಾ
ವಿಜ್ಞಾನ ಜ್ಞಾನ ತಿಳಿಸಿದಾ ಹಿರಿಯರೇ
ಮಾನವ ಲೋಕಕೇ.. ಸತ್ಯದಾ ಶಾಂತಿಯಾ…
ಸ್ನೇಹದಾ ಪ್ರೀತಿಯಾ ಮಾರ್ಗದರ್ಶಿ ಮಾರ್ಗಸೂಚಿ ಗುರುವೇ…
ನೂರು ಜನುಮಾ ಗುರು ಋಣವು ತೀರೊಲ್ಲಾ…
ನಮೋ ನಮಃ ಗುರುಗಳೇ ….

ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

Gurugalu namma gurugalu song video :

Leave a Reply

Your email address will not be published. Required fields are marked *

Contact Us