Geleya beku song details :
- Song : Geleya beku
- Singer : Priya Himesh, K S Chithra
- Lyrics : Jayanth Kaikini
- Movie : Moggina manasu
- Music : Mano Murthy
- Label : Anand audio
Geleya beku lyrics in kannada
ತಂದನಾನಾನ ನಾನಾ ತಂದನಾನಾನ
ತಂದನಾನಾನ ನಾನಾ ತಂದನಾನಾನ
ಯಾರಿಗೋ ಏನೇನೋ ನೀಡುವ ದೇವನೆ
ನನ್ನಯ ಮನವಿ ಸಲ್ಲಿಸಲೇನೂ
ಬೆಚ್ಚನೆ ಭಾವ ಮೂಡಿಸುತ್ತಿರುವ
ಮನಸಿನ ಆಸೆ ಕೇಳುವೆ ಏನೂ
ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳಯ ಬೇಕೂ
ಇದ್ದಲ್ಲಿ ಇದ್ದಹಾಗೆ ಸದ್ದೇನ್ನೇ ಆಗದಂತೆ
ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗೂ ಒಬ್ಬ ಗೆಳಯ ಬೇಕು
ನೆನೆದಾಗೆಲ್ಲ ಹಾಗೇನೆ ಓದಿ ಬರಬೇಕು
ಕಾದಾಗೆಲ್ಲ ಮುತ್ತಿನ ದಂಡ ತರಬೇಕು
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ
ಮುನಿಸು ಬಂದಾಗೆಲ್ಲ ಅವನೆ ಕ್ಷಮಿಸು ಅನಬೇಕು
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ
ಅವನು ನನ್ನೇ ನೋಡಬೇಕು …
ಕಾಡುವಂಥ ಗೆಳೆಯ ಬೇಕು, ಎಂದು ನನ್ನ
ಹಿಂದೆ ಮುಂದೆ ಸುಳಿಯಬೇಕು
ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗು ಒಬ್ಬ ಗೆಳಯ ಬೇಕು
supercinelyrics.com
ಇದ್ದಹಾಗೆ ನೀ ನನಗೆ ಚಂದ ಅನಬೇಕು
ಯಾಕೋ ಬೇಜಾರಾದಾಗ ಸುಮ್ಮನಿರಬೇಕು
ಮುದ್ದುನಗೆಯ ಹೂವನ್ನು ಮುಡಿಸಬರಬೇಕು
ಎಲ್ಲೊ ಮರೆತ ಹಾಡನ್ನು ಹೆಕ್ಕಿ ತರಬೇಕು
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೆ ನಿಂತಂತೆ
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ ಖಾತೆಯೊಂದ
ಜಂಟಿಯಾಗಿ ತೆರೆಯಬೇಕು
ದೇವರಂತ ಗೆಳಯ ಬೇಕು
ಹೇಳದೇನೆ ಅವನಿಗೆಲ್ಲ ತಿಳಿಯಬೇಕು
ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗು ಒಬ್ಬ ಗೆಳಯ ಬೇಕು