Ganesha Ninna Mahime Apara song details :
Song | Ganesha Ninna Mahime Apara |
Singers | S. P. Balasubrahmanyam |
Lyrics | Chi Udayashankar |
Movie | Ganesha Mahime |
Music | M. S. Viswanathan |
Label | Saregama Kannada |
Ganesha Ninna Mahime Apara song lyrics in Kannada :
ಗಣೇಶ ನಿನ್ನ ಮಹಿಮೆ ಅಪಾರ
ಗಣೇಶ ನಿನ್ನ ಶಕ್ತಿ ಅಪಾರ
ಭಕ್ತವತ್ಸಲಾ ಕರುಣಾಸಾಗರ
ರಕ್ಷಿಸು ರಕ್ಷಿಸು ವಿಘ್ನೇಶ್ವರ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು,
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು
ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ
ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ
ನೀ ವಿಘ್ನಗಳನು ನಾಶ ಮಾಡಿ ನೀಗು ನಮ್ಮ ಚಿಂತೆಯ
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು
ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು
ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು
ಜಯದ ಹಾದಿಯಲ್ಲಿ ಎಂದು ನಮ್ಮ ನೀನು ನಡೆಸು
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ
ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ
ಕಿವಿಗಳಲ್ಲಿ ದಿನವು ನಿನ್ನ ಕೀರ್ತಿ ತುಂಬಿ ಹರಿಯಲಿ
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ
ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ
ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ
ಜಯ ಗಣೇಶಾ
ಜಯ ಜಯ ಜಯ ಗಣೇಶಾ
ಜಯ ಜಯ ಜಯ ಗಣೇಶಾ