Dhikkara ninage devare song details
- Song : Dhikkara ninage devare
- Singer : Charan Raj
- Lyrics : Chethan kumar
- Movie : James
- Music : Charan Raj
- Label : PRK audio
Dhikkara ninage devare lyrics in kannada
ಧಿಕ್ಕಾರ ನಿನಗೆ ದೇವರೆ ಸಾಂಗ್ ಲಿರಿಕ್ಸ್
ಹೇ ದೇವರೆ….
ಮಣ್ಣು ಮಣ್ಣು ಜೀವ ಮಣ್ಣು
ಮಾಡಿ ಕುಳಿತಿರುವೆ
ಎಂತ ನೋವ ನೀಡಿರುವೆ
ಹೇ….. ದೇವರೆ
ಕಂಡ ಕನಸಿಗೆ ಬೆಂಕಿ ಹಚ್ಚಿ ಎಲ್ಲಿ ಅವಿತಿರುವೆ
ಎಂತ ಗಾಸಿ ಮಾಡಿರುವೆ
ಅಯ್ಯೋ ದೇವರೇ
ನಗಿಸಿ ನಗಸಿ ಅಳಿಸೋ ನೀನು ಮೋಸಗಾರನು….
ಎಲ್ಲ ಕೊಟ್ಟು ಕಸಿಯೋ ನೀನು ಆಟಗಾರನು
ಹೋ ಹೋ ಧಿಕ್ಕಾರ ನಿನಗೆ ದೇವರೆ ಈ ಉಸಿರು ಇರೋವರೆಗೆ
ಕಸಿದುಕೊಂಡ ಜೀವವ
ಮರಳಿ ಕೊಡು ನನಗೆ
ಧಿಕ್ಕಾರ ನಿನಗೆ ದೇವರೆ ನಿನ್ನ ಈ ನಡೆಗೆ
ಕ್ಷಮಿಸಲಾರೆ ನಿನ್ನನ್ನು ನಾನು ಕೊನೆವರೆಗೆ
ಹೋ ಹೋ ಹೋ ಹೋ ಹೋ
ಅಯ್ಯೋ ದೇವರೇ
ನಿನ್ನ ನೆನಪಲ್ಲಿಯೇ ಪ್ರತಿದಿನ ಕಳೆಯುವುದು
ನಿನ್ನ ಧ್ವನಿ ಕೇಳಲು ಕಂಬನಿಯು ಮಿಡಿಯುವುದು
ಹೇಗೆ ಹೇಗೆ ಸಹಿಸುವುದು ಈ ವ್ಯಥೆ
ಏಕೆ ಏಕೆ ಬರದಿರುವೆ ಈ ಕಥೆ ಹೇಳು ನೀ
ಹೋ ಹೋ ಧಿಕ್ಕಾರ ನಿನಗೆ ದೇವರೇ
ಈ ದುಃಖ ಅನುಭವಿಸು
ಮನಸ್ಸು ಪಡುತಿರೋ ಕಷ್ಟವ ನೀನು ಬಾ ಭರಿಸು
ಧಿಕ್ಕಾರ ನಿನಗೆ ದೇವರೇ ನನ್ನ ಸ್ವೀಕರಿಸು
ಒಳ್ಳೆ ತನದ ಜೀವವ ಮತ್ತೆ ನೀ ಕರೆಸು
ಹೋ ಹೋ ಹೋ ಹೋ ಹೋ ಹೋ