Daivada karuneyu lyrics ( ಕನ್ನಡ ) – Jeevanadhi

Daivada karuneyu song details

  • Song : Daivada karuneyu
  • Singer : Manjula Gururaj, Rajesh krishnan
  • Lyrics : R N Jayagopal
  • Movie : Jeevanadhi
  • Music : Koti

Daivada karuneyu lyrics in kannada

ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ
ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ

ಹೋ.. ಓಓಓಓಓ ..

ನನಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು

ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ

ಬೆಂಗಾಡಲಿ ದಾಹದಿಂದ
ಅಲೆದಿರೆ ನಾನು
ಅಮೃತದ ಹೊಳೆಯಾಗಿ
ನೀ ಬಂದೆಯೋ…

ಇರುಳಲ್ಲಿ ಅಂಧಳಂತೆ
ನಡೆದಿರೆ ನಾನು
ನವ ಜ್ಯೋತಿ ಕಿರಣವ
ನೀ ತಂದೆಯೋ..

ನಾ ಬಂಜೆ ಎನ್ನೋ ಕಪ್ಪು ನೀಗಿದೆ
ಹೊಸ ತಾಯಿಯಾಗಿ ನನ್ನ ಮಾಡಿದೆ ನಗುತ ನೀ ಬಂದೆ ಹರುಷ ನೀ ತಂದೆ ನಮಗೆ ಕಣ್ಣಾದೆಯೋ

ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ

ದಿನವೆಲ್ಲ ನಿನ್ನ ಸಂಗ
ಆದಡಿ ನಾನು ನಲಿದೆ
ಯುಗವೊಂದು ಕ್ಷಣವಾಗಿ
ತಾ ಓಡಿತು

ಬಾಡಿದ್ದ ಬಳ್ಳಿಯಲ್ಲಿ
ಕಂದ ನಿನ್ನ ಪ್ರೀತಿ
ಹೊಸದೊಂದು ಚೇತನವ
ಇಂದು ತಂದಿತು
ಕಂಡಂಥ ಕನಸು ಪೂರ್ತಿ ಆಯಿತು ಕವಿದಿದ್ದ ಮೋಡ ದೂರಾಯಿತು.
ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ ಎಂದು ನೀ ಬಾಳಿರು

ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ

ಹೋ.. ಓಓಓಓಓ .. ನಮಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು

Daivada karuneyu song video :

https://youtu.be/Qvpwe3RT_9I

Leave a Comment

Contact Us