Bombe helalilla lyrics ( ಕನ್ನಡ ) – Rajesh krishnan

Bombe helalilla song details

  • Song : Bombe helalilla
  • Singer : Rajesh krishnan
  • Lyrics : V Nagendra prasad
  • Music : Arjun janya

Bombe helalilla lyrics in kannada

ಲಾಲಿ ಲಾಲಿ ಮಲಗು ರಾಜಕುಮಾರ ಸಾಂಗ್ ಲಿರಿಕ್ಸ್

ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ದಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೆ ತಪ್ಪಿ ಹೋಯ್ತು ಹಾದಿ
ಸೇವೆ ಮಾಡು ಅಂತ ಕಳಿಸಿದ್ದಾ ಭಗವಂತ
ಸಾಕು ಬಾರೋ ಅಂತ
ಮಾಡಿದನಾ ಭಲವಂತ
ಲಾಲಿ ಲಾಲಿ ಮಲಗು ರಾಜಕುಮಾರ
ಲಾಲಿ ಲಾಲಿ ಮಲಗು ರಾಜಕುಮಾರ

ಹೇಳೋದೇನು ನಾವು
ಮರೆಯೋದ್ಹೇಗೆ ನೋವು
ಬೆಳ್ಳಿ ಬೆಳ್ಳಿ ಪರದೆಗಳೆ ಮುಸುಕು ಆಗಿವೆ
ಎಲ್ಲಾ ಮೂಕ ನೋವು ಮುಸ್ಸಂಜೆ ಮುಂಜಾವು
ಅಪ್ಪು ಬೇಕೆ ಬೇಕೆಂದು ಹಠವ ಮಾಡಿವೆ
ಹುಟ್ಟೋದೊಂದ್ಸಲ… ಸಾಯೋದೊಂದ್ಸಲ…
ಸತ್ತರು ಬದುಕಿರುವೆ.. ನಿನ್ನಂತ್ಯಾರಿಲ್ಲ..
ಲಾಲಿ ಲಾಲಿ ಮಲಗು ರಾಜಕುಮಾರ
ಕೋಟಿ ಕೋಟಿ ಹೃದಯ ಗೆದ್ದ ಕುಬೇರ

ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ದಿ
ನಾನು ನಾನು ನಾನು ಅನ್ನೋ ಭ್ರಾಂತಿಯನ್ನು
ಹೊತ್ತು ತಿರುಗೊ ಮಂದಿಗೆ ಪಾಠ ಮಾಡಿದೆ
ದಾನ ಧರ್ಮ ಮಾಡಿ
ಬೇಡೋದೆಲ್ಲ ನೀಡಿ
ಹೇಗೆ ಬಾಳಬೇಕೆಂದು ನೀನು ತೋರಿದೆ
ಈ ಭೂಮಿ ಋಣ ಮುಗಿಯಿತೇ ಯುವರತ್ನ
ದೊಡ್ಡದು ನಿನ್ನ ಗುಣ
ಮರೆಯವು ನಿನ್ನನ್ನ
ಲಾಲಿ ಲಾಲಿ ಮಲಗು ರಾಜಕುಮಾರ
ಚರಿತೆಯಲ್ಲಿ ಎಂದು ನೀನು ಅಮರ

ಬೊಂಬೆ ಹೇಳಲಿಲ್ಲ ಯಾರೂ ಹೇಳಲಿಲ್ಲ
ನೀನಿಷ್ಟು ಬೇಗ ಹೋಗೋ ಸುದ್ದಿ
ಸನ್ನೆ ಮಾಡಲಿಲ್ಲ ಶಕುನ ಕಾಣಲಿಲ್ಲ
ಹೃದಯಾನೆ ತಪ್ಪಿ ಹೋಯ್ತು ಹಾದಿ

Bombe helalilla song video :

https://youtu.be/Kp2eYdY9kF4

Leave a Comment

Contact Us