Alabyada jeeva lyrics ( ಕನ್ನಡ ) – Kaliveera

Alabyada jeeva song details

  • Song : Alabyada jeeva
  • Singer : Siddharth Belmannu
  • Lyrics : Arasu anthare
  • Movie : Kaliveera
  • Music : B R Naveen Kumar
  • Label : Lahari music

Alabyada jeeva lyrics in kannada

ಅಳಬ್ಯಾಡ ಜೀವ ಸಾಂಗ್ ಲಿರಿಕ್ಸ್

ಅಳಬ್ಯಾಡ ಜೀವ ಕಾಡೋ ನೋವ
ಮರ್ಸೋಕೆ ನಾನಿಲ್ಲವೆ ಇನ್ನಾ….
ನಿನ್ನ ಕಣ್ಣೀರ ಒರೆಸೋಕೆ ಚಿನ್ನ
ನಿನ್ನ ಮ್ಯಾಲೆ ಪ್ರೀತಿ ಆಸೆ ನೋಡು
ನಿನ್ನ ಚಿಂತೆ ನನ್ನ ಚಿಂತೆ ಒಂದೇ
ಇನ್ನೂ ಎಲ್ಲಾನು ತಿಳಿತೈತೆ ಮುಂದೆ

ಕಾಡಿ ಬೇಡಿ ಕೇಳುತೀನಿ
ಗಾಯ ಮಾಯ ಮಾಡೋ ದ್ಯಾವ್ರ
ಚಿಂತೆ ಕರಗಿಸೋಕೆ ಬೇಗನೆ
ನನ್ನ ಜೀವ ಹೂವನೀಗ ಬಾಡದಂತೆ ಕಾಯಬೇಕು
ಕೂರಲಾರೆ ಇನ್ನೂ ಸುಮ್ಮನೆ

ಹೂವೆ ಹೂವೆ ಮಾತಾಡು
ನಮ್ಮ ದ್ಯಾವ್ರೆ ಈ ಕಾಡು
ಹೂವೆ ಹೂವೆ ಮಾತಾಡು
ನಮ್ಮ ದ್ಯಾವ್ರೆ ಈ ಕಾಡು
ಅಳಬ್ಯಾಡ ನನ್ನ ಜೀವ ನೀನು
ನಿಂಗಾಗಿ ಈ ಪ್ರೀತಿ ಹಾಡು
ಚಿನ್ನ ಸಾಕಿನ್ನು ನಿಂಗೆ ಈ ಪಾಡು
ದೇವಿ ನೀನು ತೇರು ನಾನು
ಹೊತ್ತು ತಿರುಗುತೀನಿ ನಿನ್ನ
ಅಷ್ಟೇ ಸಾಕು ಸ್ವರ್ಗ ಪ್ರಾಪ್ತಿಗೆ
ಜೀವನ ಪೂರ ನಿನ್ನ ನಾನು
ನೆರಳಿನಂಗೆ ಕಾಯುತೀನಿ ನೀನು ನನ್ನ ಪ್ರಾಣ ಮಲ್ಲಿಗೆ
ಸಾಯೋ ಗಂಟ ನಾನಿನ್ನ ಸಾರಥಿ ಕೇಳೆ ಓ ಚಿನ್ನ
ಸಾಯೋ ಗಂಟ ನಾನಿನ್ನ ಸಾರಥಿ ಕೇಳೆ ಓ ಚಿನ್ನ

ಅಳಬ್ಯಾಡ ಜೀವ ಕಾಡೋ ನೋವ
ಮರ್ಸೋಕೆ ನಾನಿಲ್ಲವೆ ಇನ್ನಾ….
ನಿನ್ನ ಕಣ್ಣೀರ ಒರೆಸೋಕೆ ಚಿನ್ನ
ನಿನ್ನ ಮ್ಯಾಲೆ ಪ್ರೀತಿ ಆಸೆ ನೋಡು
ನಿನ್ನ ಚಿಂತೆ ನನ್ನ ಚಿಂತೆ ಒಂದೇ
ಇನ್ನೂ ಎಲ್ಲಾನು ತಿಳಿತೈತೆ ಮುಂದೆ

Alabyada jeeva song video :

Leave a Comment

Contact Us