Amma nanni januma lyrics ( ಕನ್ನಡ ) – Amma I love you – Super cine lyrics

Amma nanni januma – Sunil Kashyap Lyrics

Singer Sunil Kashyap

Amma nanni januma song details – Amma I love you

▪ Song : Amma nanni januma
▪ Music : Gurukiran
▪ Lyrics: V. Nagendra Prasad
▪ Singers: Sunil Kashyap

Amma nanni januma song lyrics in Kannada – Amma I love you

ಅಮ್ಮ ನನ್ನ ಈ ಜನುಮ ನಿನ್ನ ವಾರಾಧನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ

ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ
ನಿಲದೇ ಮಿಡಿದಿದೆ ಅಮ್ಮ

ಗುಡಿಯ ಹಂಗಿರದ ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ

ಅಮ್ಮ ನನ್ನ ಈ ಜನುಮ ನಿನ್ನ ವಾರಾಧನವಮ್ಮ

ನಿನ್ನ ಒಂದು ಕೈ ತುತ್ತು ಸಾಕು
ಈ ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು
ಆ ನೆನಪಿನಲ್ಲೇ ಸೆರೆವಾಸ ಇರುವೆನು

ನೀನೆ ನನ್ನ ಲೋಕವು ನೀನೆ ನನ್ನ ಜೀವವು
ನೀನೆ ನನಗೆ ಎಲ್ಲವು ಅಮ್ಮ

ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ

ನಿನ್ನ ಒಂದು ಸಾಂತ್ವನವೇ ಸಾಕು
ನೋವೆಲ್ಲಾ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ನು ತಡವು ಸಾಕು
ಜಗವನ್ನೆಲ್ಲ ನಾ ಗೆದ್ದು ಬರುವೆನು

ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವಾ ಅರಿತೆನು ಅಮ್ಮ

ಅಮ್ಮ ನನ್ನ ಈ ಜನುಮ ನಿನ್ನ ವಾರಾಧನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ

ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ
ನಿಲದೇ ಮಿಡಿದಿದೆ ಅಮ್ಮ

ಗುಡಿಯ ಹಂಗಿರದ ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ

ಅಮ್ಮ ….

Leave a Comment

Contact Us