Aa devara haadidu lyrics ( ಕನ್ನಡ ‌‌) -Appu

Aa devara haadidu song details :

  • Song : Aa devara haadidu
  • Singer : Dr Rajkumar
  • Lyrics : Hamsalekha
  • Movie : Appu
  • Music : Gurukiran

Aa devara haadidu lyrics in kannada

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ನೋವಲ್ಲು ನೂರು,
ಸುಖವುಂಟು ಇಲ್ಲಿ
ಸುಖದಲ್ಲು ನೂರು,
ನೋವುಂಟು ಇಲ್ಲಿ
ಈ ಕಾಲದ, ಕೈಯಲ್ಲಿರೋ
ಗಡಿಯಾರವೇ ನಾನು ನೀನು
ನಡೆಸೋನದೇ ಕೊನೆಯ ಮಾತು

ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೇ, ಹೃದಯಗಳು,
ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ,
ಕ್ಷಣಕೊಮ್ಮೆ ವಿರಹ
ಹಣೆ ಮೇಲೆ ಕುಳಿತ,
ಆ ವಿಧಿಯ ಬರಹ

ಈ ಭೂಮಿಯೇ, ಸುರವೀಣೆಯು
ಸ್ವರತಂತಿಯೇ ನಾನು ನೀನು
ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು
ಅದು ಎಂದೂ ಬದಲಾಗದು
ಭರವಸೆಯೇ, ಹೊಸಬೆಳಕು
ನಿಜ ಪ್ರೀತಿ ನಿಯಮ ಇದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು

Aa devara haadidu song video :

Leave a Comment

Contact Us