Yetthuthaaro lyrics ( ಕನ್ನಡ ) – Amma i love you – Super cine lyrics

 Yetthuthaaro lyrics – Amma i love you



Yetthuthaaro song details 


  • Song : Yetthuthaaro 
  • Singer : Chintan Vikas , Siddhartha belmanu
  • Lyrics : Ghouse Peer
  • Music : Gurukiran
  • Movie : Amma i love you

Yetthuthaaro lyrics in Kannada


ಎತ್ತುತ್ತಾರೋ ಲಿರಿಕ್ಸ್

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಹೊಟ್ಟೆಗಾಗಿ ಬಿಕ್ಷೆ 
ತುಂಡು ಬಟ್ಟೆಗಾಗಿ ಬಿಕ್ಷೆ 
ದಾಹಕ್ಕಾಗಿ ಬಿಕ್ಷೆ 
ಅತೀ ಮೋಹಕ್ಕಾಗಿ ಬಿಕ್ಷೆ 
ಬೋಗಕ್ಕಾಗಿ ಬಿಕ್ಷೆ 
ಶುಭ ಯೋಗಕ್ಕಾಗಿ ಬಿಕ್ಷೆ 
ಪ್ರಾಣಕ್ಕಾಗಿ ಬಿಕ್ಷೆ 
ಅಭಿಮಾನಕ್ಕಾಗಿ ಬಿಕ್ಷೆ 

ಎತ್ತುತ್ತಾರೊ ಎಲ್ಲಾ ಎತ್ತುತ್ತಾರೊ 
ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೊ

ಮೇಲು ಕೀಳು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಇಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವೂ
ಯಾರಾದರೇನೂ ವಿಧಿಯ ಕಣ್ಣು ಬಿಡದು ಯಾರನ್ನು
ಏನಿದ್ದರೇನೂ ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೋರು ಆಚೆಗೆ 

ಎತ್ತುತ್ತಾರೋ ಎಲ್ಲ ಎತ್ತುತ್ತಾರೋ
ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೋ

ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ ಚಾಚಿ ಕೇಳೊದೆಲ್ಲಾ ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನೂ ಬೆಳಕು ನೀಡದು
ಬಯಸೋದೆ ನಾವೊಂದು ಆಗೋದೆ ಇನ್ನೊಂದು 

ಎತ್ತುತ್ತಾರೊ ಎಲ್ಲಾ ಎತ್ತುತ್ತಾರೊ
ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೊ
ಮೋಡಿಗಾಗಿ ಭಿಕ್ಷೆ 
ಹಸಿ ನೋಟಿಗಾಗಿ ಭಿಕ್ಷೆ 
ಸ್ಥಾನಕ್ಕಾಗಿ ಭಿಕ್ಷೆ 
ಸಂತಾನಕ್ಕಾಗಿ ಭಿಕ್ಷೆ 
ಸಿದ್ದಿಗಾಗಿ ಭಿಕ್ಷೆ 
ಪ್ರಸಿಧ್ಧಿಗಾಗಿ ಭಿಕ್ಷೆ 
ಖರ್ಚಿಗಾಗಿ ಭಿಕ್ಷೆ 
ಆ ಕುರ್ಚಿಗಾಗಿ ಭಿಕ್ಷೆ 

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ 
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ

Yetthuthaaro song video : 

Leave a Comment

Contact Us