Yello jinugiruva neeru song details
- Song : Yello jinugiruva neeru
- Singer : Shreya goshal
- Movie : Just math mathalli
- Lyrics : Sudhir Attavar , Raghavendra kamath
- Music : Raghu Dixit
- Label : Anand audio
Yello jinugiruva neeru lyrics in Kannada
ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸರಸ
ಎಲ್ಲೋ ಚಿಲಿಪಿಲಿಯ ಭಾವವು
ಮುಂಜಾನೆ ಮಂಜು ಹನಿ ಭೂಮೀಲಿ
ತಂಪಾಗಿ ತೀಡಿರುವ ಪ್ರೇಮ
ಕೆಂಪಾದ ಕಿರಣ ತುಸು ಹಾಯಾಗಿ ಭುವಿ
ಮುತ್ತಿಟ್ಟ ಕಿವಿಗುಟ್ಟೊ ಪ್ರೇಮ
ಪ್ರೇಮ ಓ ಅದು ಎಂಗಂತಂದ್ರೆ ಯೋಳಕ್ ಬರ್ತೈತೆ
ಜಸ್ಟ್ ಮಾತ್ ಮಾತಲ್ಲಿ ಗೊತ್ತಿಲ್ದಂಗ್ ಮನಸ್ನಾಗ ಮೂಡ್ತೈತೆ
ಬರಡಾದ್ ಬಾಳ್ಗೆ ಬಣ್ಣಾನ್ ಸುರ್ಸಿ ರಂಗನ್ ಚಲ್ತೈತೆ
ಈ ಸುಖವನ್ನನುಭವ್ಸ್ದಿದ್ರೆ ಬದುಕು ವ್ಯರ್ಥ ಅನ್ಸ್ತೈತೆ
ಬೆಳ್ಳಿ ಬೆಳಕನ್ನು ಹೀರಿ ಸೊಂಪಾಗಿ ಹೂಬಿರಿದು
ನಕ್ಕಂತ ನಗುವಲ್ಲಿ ಪ್ರೇಮ
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂ ನಗಲು
ಪರಿಮಳವೇ ಹೊನಲಾಗಿ ಪ್ರೇಮ
ದಿನಬೆಳಗಿನಲಿ ಸವಿಗನಸುಗಳು
ಚೀಕಾಡೊ ಒಲವಿದು ಪ್ರೇಮ
ಹೊಸಲೋಕದಲಿ ಸವಿಭಾವಗಳು
ನಲಿ ನಲಿಯುತ್ತ ಜಿಗಿದಿದೆ ಪ್ರೇಮ
ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸರಸ
ಎಲ್ಲೋ ಚಿಲಿಪಿಲಿಯ ಭಾವವು
ಮೋಹನ ಯಾರಿವ, ನನ್ನೀ ಮನ ಸೆಳೆದವ
ನನ್ನನ್ನೇ ನಂಬಲಾಗದ ಸಂಗೀತದ,
ಅಲೆಯಲ್ಲಿ ತೇಲಿ ಹೋದೆ ನಾ
ಕಾದಿದೆ ನವಿಲು ಕಾರ್ಮೋಡ ಬರಲು
ಅರಳಲು ತನ್ನ ಗರಿಯು ಕಾಣಲು
ಒಲವಿನ ರಂಗು ಬಾನಲೂ
ಎಲ್ಲೆಲ್ಲೂ ಜಾಜಿ-ಮೊಲ್ಲೆ ಹೂವ ಸಾಲೇ ಅಲ್ಲಲ್ಲಿ,ಒಲವಿನ ಮಾಲೆ
ಕಂಪಲ್ಲಿ ಕಾವ್ಯದಲ್ಲಿ, ಮೌನದಲ್ಲಿ ಮಾತಲ್ಲಿ
ಅರಿಯೆ ನಾ ಪ್ರೇಮದ ಲೀಲೆ
ಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸರಸ
ಎಲ್ಲೋ ಚಿಲಿಪಿಲಿಯ ಭಾವವು