Yavanig gotthu song details
- Song : Yavanig gotthu
- Singer : Tippu
- Lyrics : Yogaraj bhat
- Movie : Paramaathma
- Music : Yogaraj bhat
Yavanig gotthu lyrics in Kannada
ಏನು ಮಾಡೋದು ಒಂಟಿ ಹೂವೊಂದು
ರೋಡಲ್ಲಿ ಸಿಕ್ತು, ರೋಡಲ್ಲಿ ಸಿಕ್ತು
ಏನು ಹೇಳೋದು ಇಂತ ಟೈಮಲ್ಲಿ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಎದೆ ಎಂಬ ಕಾಲಿ ಡಬ್ಬಕ್ಕೆ ಒಂದು
ಸಣ್ಣ ಕಲ್ಲು ಬಿದ್ದಂಗಾಯ್ತು
ಡಬ್ಬಾ ಯಾತಕ್ಕೆ ಸೌಂಡು ಮಾಡತ್ತೋ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಇವಳು ಸಿಗ್ತಾಳ, ಕೈ ಕೊಡ್ತಾಳ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಅದು ಯಾವ್ದೋ ಒಂಟಿ ಹಕ್ಕೀ ಸದ್ದನ್ನ
ಕೇಳುತ್ತಾ ಮಲ್ಕೊಂಡಿದ್ದೆ ಮಧ್ಯಾನ
ಕಾಲ್ಕೇಜಿ ಪ್ರೀತಿಗೊಂದು ಪಧ್ಯಾನ
ಬರೆದಿಟ್ಟು ಕೆರೆದುಕೊಂಡೆ ಗಡ್ಡಾನ
ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ ಹೈ ಹೀಲು ಹಾಕಿ
ರಾಜಕುಮಾರಿ ನಿಂತಗಾಯ್ತು
ಇಂತ ಟೈಮಲ್ಲಿ ಹಾಡು ಬೇಕಿತ್ತಾ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ದೇವದಾಸಾನು ಎಣ್ಣೆ ಬಿಟ್ಟಿದ್ನ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಕನಸಲ್ಲಿ ಯಾಕೋ ಯಾವ್ದು ಸಾಲಲ್ಲಾ
ಮೊಡಾನ ಮುದ್ದು ಮಾಡೋಕಾಗಲ್ಲ
ಚಿಟ್ಟಿಗೆ ಚಡ್ಡಿ ಹಾಕೋಕಾಗಲ್ಲ
ನಿಮ್ಗೆ ಗೊತ್ತಲ್ವಾ ನಾನು ಮುಟ್ಟಾಳ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರೀ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು
ಇವಳ ಮೂತೀಲೆ ಇರಬಹುದಿತ್ತು
ನನ್ನ ಆಸೆಗು ಮೀನಿಂಗ್ ಇರಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರೂ ತಿಂಡಿ ಸಿಗಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು