Yarele ninna mechidavanu lyrics ( ಕನ್ನಡ ) – Sipayi

Yarele ninna mechidavanu song details

  • Song : Yarele ninna mechidavanu
  • Singer : Manu , S Janaki
  • Music : Hamsalekha
  • Lyrics : Hamsalekha
  • Movie : Sipayi

Yarele ninna mechidavanu lyrics in Kannada

ಯಾರೆಲೇ ನಿನ್ನ ಮೆಚ್ಚಿದವನು
ಯಾರೆಲೇ ಕೆನ್ನೆ ಕಚ್ಚುವವನು
ಯಾರೆಲೇ ಮಲ್ಲೆ ಮುಡಿಸುವವನು
ಯಾರೆಲೇ ಸೆರಗ ಎಳೆಯುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಸೇರಗ ಎಳೆಯೊ ಹುಡುಗ ನಾನು ತಾನೆ
ನಿನ್ನ ಗಂಡ ನಾನೆ

ಇಲ್ಲಾ ಇಲ್ಲಾ
ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ

ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

ಯಾರೆಲೇ ನೀನು ಮೆಚ್ಚಿದವನು
ಯಾರೆಲೇ ತಾಳಿ ಕಟ್ಟುವವನು
ಯಾರೆಲೇ ನಿನ್ನ ಕಾಡುವವನು
ಯಾರೆಲೇ ನಿನ್ನ ಕೋಡುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಜಿನದ ನಾನೇ

ಇಲ್ಲಾ ಇಲ್ಲಾ
ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನಿನಗಮ್ಮ

ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿಗೆ ಬಂದರೆ ಹೂವಿಗೇ ಭಯವಾಗದೆ

ಯಾರೆಲೇ ನಿನ್ನ ಮುದ್ದು ಗಂಡ
ಯಾರೆಲೇ ನಿನ್ನ ತುಂಟ ಗಂಡ
ಯಾರೆಲೇ ನಿನ್ನ ವೀರ ಗಂಡ
ಯಾರೆಲೇ ನಿನ್ನ ಧೀರ ಗಂಡ

ಹೇಳೇ ಹುಡುಗಿ
ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ
ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

Yarele ninna mechidavanu song video :

Leave a Comment

Contact Us