Yaaro kannali song details
- Song : Yaaro kannali
- Singer : Rajesh Krishnan , Nanditha
- Lyrics : K Kalyan
- Music : G R Shankar
- Movie : Orata i love you
Yaaro kannali lyrics in Kannada
ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಸಾಂಗ್ ಲಿರಿಕ್ಸ್
ಯಾರೋ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊ
ಯಾರೋ ಗಾಳೀಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆಯಿಟ್ಟು
ಇಲ್ಲೆ ಇದ್ದಂಗಿದ್ದು ಎದ್ದು ಹೋದವರ್ಯಾರೋ….
ಅವಳ್ಯಾರೋ ಹುಡುಗಿ ನನ್ನನ್ನೇ ಹುಡುಕಿ ಪ್ರೀತಿಸುತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರನೂ ಇರದೇ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ
ಯಾರೋ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊ
ಯಾರೋ ಗಾಳೀಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆಯಿಟ್ಟು
ಇಲ್ಲೆ ಇದ್ದಂಗಿದ್ದು ಎದ್ದು ಹೋದವರ್ಯಾರೋ….
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಒಂದೊಂದು ಹುಡುಗಿರಲ್ಲೂ
ನೂರು ನೂರು ಕನಸನುಂಟು
ಯಾರು ಎಲ್ಲೂ ಹೇಳೊದಿಲ್ಲ
ಹಾಗಂತ ಯಾರು ಕೂಡ
ಪ್ರೀತಿ ಮಾಡೋದಿಲ್ಲ ಅಂತ
ಎಂದೂ ಬಾಯಿ ಬಿಡೋದಿಲ್ಲ
ಹಾ… ನನ್ನಂತ ಹುಡುಗನಿಗೆ
ಪ್ರೇಮ ಗೀಮ ಅನ್ನೋದೆಲ್ಲಾ
ಇಲ್ಲಿವರೆಗೂ ತಿಳಿದೇ ಇಲ್ಲ
ಎಲ್ಲಿಂದ ಬಂದ್ಲೋ ಇವಳು
ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಲ್ತಾಳಲ್ಲ
ಇದು ಪ್ರೀತಿ ಅಲ್ಲ ಪ್ರೇಮನೂ ಅಲ್ಲ
ಬರೀ ಸ್ನೇಹ ಅಲ್ಲ ಅಂತ ಹೇಳುತಿಲ್ಲ
ಅದೇನೊ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆನಾ ಮರೆಯೋದಿಲ್ಲ
ಯಾರೋ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊ
ಯಾರೋ ಗಾಳೀಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆಯಿಟ್ಟು
ಇಲ್ಲೆ ಇದ್ದಂಗಿದ್ದು ಎದ್ದು ಹೋದವರ್ಯಾರೋ….
ಹೋದವರ್ಯಾರೋ…
ಹೋದವರ್ಯಾರೋ…
ಪ್ರೀತೀಲಿ ಸೋಲೆ ಇಲ್ಲ ಸೋತಮೇಲೆ ಬದುಕೇ ಇಲ್ಲ
ಬದುಕು ಒಂದು ಒಗಟಿನಂತೆ
ಈ ನನ್ನ ಬದುಕಿನಲ್ಲಿ ನನ್ನವರೂ ಯಾರು ಇಲ್ಲ
ನಾನು ಒಬ್ಬ ಒರಟನಂತೆ
ಈಗಷ್ಟೇ ಈಗ ಅಷ್ಟೇ
ಯಾರೋ ನನ್ನ ಎದೆಗೆ
ಕಲ್ಲನ್ನ ಹೊಡೆದು ಹೊಡೆದು ಹೋದಂತೆ
ನನ್ನಲ್ಲೇ ಏನೋ ಒಂದು
ಕಳೆದುಕೊಂಡ ಹಾಗೆ ಇಂದು
ಹಾಗೆ ಹೋಯ್ತು ಮಿಂಚಿನಂತೆ
ಅರೆ ತಾಳಲಾರೆ ಮಾತಾಡಲಾರೆ
ಅದೇಕೆ ಅಂತ ನಾ ಹೇಳಲಾರೆ
ನೀ ಯಾರೆ ಆಗಿರು
ನೀ ಎಲ್ಲೇ ಅವಿತಿರು
ನೀ ಇಲ್ಲದೇನೆ ನಾ ಬಾಳಲಾರೆ..
ಯಾರೋ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರೊ
ಯಾರೋ ಗಾಳೀಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆಯಿಟ್ಟು
ಇಲ್ಲೆ ಇದ್ದಂಗಿದ್ದು ಎದ್ದು ಹೋದವರ್ಯಾರೋ….
ಯಾರೋ…….
ನನ್ನ ಒಳಗಿಂದಾನೆ ನನ್ನ ಕದ್ದವರ್ಯಾರು
ಯಾರೋ…..
ಇಲ್ಲೇ ಇದ್ದಂಗಿದ್ದು ಎದ್ದು ಹೋದವರ್ಯಾರೋ…
ಹೋದವರ್ಯಾರೋ
ಹೋದವರ್ಯಾರೋ