Yaarige yaaru song details
- Song : Yaarige yaaru
- Singer : Rajesh Krishnan
- Lyrics : Hamsalekha
- Movie : Snehaloka
- Music : Hamsalekha
- Label : Anand audio
Yaarige yaaru lyrics in Kannada
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ
ಅಂತಸ್ತೆ ಮುಖ್ಯಾ ರಿ
ವರ್ಚಸ್ಸೇ ಲೆಕ್ಕಾ ರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನ್ನೇನ್ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆ ರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ
ಅಪ್ಪ ಹಾಕಿದ ಮರ ಅಂತ ಹಗ್ಗ ಕಟ್ಟಿ ನೇಣ್ ಹಾಕೊಳ್ತಾರಲ್ರಿ
ಹಳೆ ನೀರು ಹೋಗಿ ಹೊಸ ನೀರು ಬಂದ್ರೆ ಬೇಡ ಅನ್ನಬಾರದ್ರಿ
ರಿ ರಿ ರಿರಿರಿ ರಿರಿ ರಿರಿರಿ
ಬಣ್ಣ ಜಾತಿಅಂತ ದೇವ್ರೆ ಸಾವಿರ ತಪ್ಪು ಮಾಡಿ ಕುಂತಿದಾನಲ್ರಿ
ಪ್ರೀತಿ ಮಾಡಿ ಅವನ ತಪ್ಪನ್ನೆಲಾ ಸರಿ ಮಾಡೋದ್ ಒಳ್ಳೇದ್ ಕಣ್ರಿ
ಮೂರು ಘಳಿಗೆ ಬಾಳಿ ನೊಳಗೆ
ಪ್ರೀತಿ ಮಾಡಿ ಒಂದು ಘಳಿಗೆ
ಮನಸನ್ನು ಕಲ್ಲು ಮಾಡುದಿರಿ
ಮಸೆದು ಮಸೆದು ಬೆಂಕಿ ತಂದಿರಿ
ದ್ವೇಷದ ಬೆಂಕಿಯ ಬೆಳಕಲಿ
ನಮ್ಮನು ಬಾಳಿ ಎಂದಿರಿ
ಬದುಕಿನ ಬಂದು ಪ್ರೀತಿಯೆ ಎಂದು ತಿಳಿದು ಕೊಳ್ಳದಿರುವ ಜಾಣ ದಡ್ಡ ರಿ
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ
ಅಂತಸ್ತೆ ಮುಖ್ಯಾ ರಿ
ವರ್ಚಸ್ಸೇ ಲೆಕ್ಕಾ ರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನ್ನೇನ್ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆ ರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ
ಕೊಲೆ ಮಾಡಿದರು ಜೈಲು ಹಾರಿದರು ಕ್ಷಮೆ ಕೇಳುತಾರಿ
ಲಂಚ ನುಂಗಿದರು ದೇಶ ಮಾರಿದರು ಅಪೀಲ್ ಹೊಗುತಾರಿ
ರಿರಿ ರಿರಿರಿ ರಿರಿ ರಿರಿರಿ
ಬಿಡೋದಿಲ ಅಂತ ನದಿ ನೀರುಗಳಾ ಬಿಡ್ತಾಇದೀವಲ್ರಿ
ಪ್ರೀತಿ ಮಾಡಿದವ್ರ ಒಮ್ಮೆ ಕ್ಷಮಿಸಲು ಮುಖ ನೋಡ್ತಿರಲ್ರಿ
ನೀವು ಮಾಡ್ದ್ರೆ ಮದುವೆಯಂತೆ ನಾವೆ ಆದ್ರೆ ಪ್ರೀತಿ ಅಂತೆ
ಭರತನ ತಾಯಿ ಶಕುಂತಲ ಮದುವೆ ಆಗಿಯೆ ಹೆತ್ತಳಾ
ಯಾರೆ ನೀನು ಅಂದರು ರುಜುವಾತ್ ಮಾಡದೆ ಬಿಟ್ಟಳಾ
ಬದುಕಿಗೆ ಎಂದು ಪ್ರೀತಿ ಯೆ ಬಂದು ತಿಳಿದುಕೊಳ್ಳದಿರುವಾ ಜಾಣ ದಡ್ಡ ರಿ
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ
ಅಂತಸ್ತೆ ಮುಖ್ಯಾ ರಿ
ವರ್ಚಸ್ಸೇ ಲೆಕ್ಕಾ ರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನ್ನೇನ್ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆ ರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ
ಬಂದುಗಳೆಲ್ಲ ಸುಳ್ರಿ