Categories
Antara Mitra Sonu nigam

Turthinalli geechida lyrics ( ಕನ್ನಡ ) – Chowka

Turthinalli geechida song details

  • Song : Turthinalli geechida
  • Singer : Antara Mitra , Sonu nigam
  • Lyrics : Jayanth kaikini
  • Movie : Chowka
  • Music : Shridhar V Sambharma

Turthinalli geechida lyrics in Kannada

ತುರ್ತಿನಲ್ಲಿ ಗೀಚಿದ
ಅರ್ದಂಬರ್ದ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದ
ಎಂದು ಯಾರು ಕಾಣದ
ಅಂದವಾದ ಬಣ್ಣದ
ಸ್ವಪ್ನದಲ್ಲೇ ಭಾಗವಹಿಸು ಆಗದ
ಸಂತೆಯ ಮಧ್ಯವು ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ

ನಾಲ್ಕು ದಿನದ ಜೀವನ ಜೀವನ
ಪ್ರೀತಿಸೋಣ ಪ್ರೀತಿಸೋಣ
ಈ ಕ್ಷಣ ಈ ಕ್ಷಣ

ನಾನೊಬ್ಬಳೇ ಇದ್ದಾಗಲೂ
ನಿನ್ನೊಂದಿಗೆ ಮಾತಾಡುವೆ

ನನ್ ಊರಿಗೂ ನಿನ್ ಊರಿಗೂ
ಈ ಪ್ರೀತಿಯೇ ಸೇತುವೆ
ನೆನೆವ ನಯನದಿ ಖುಷಿಯ ಹನಿಗವನ
ಮನದ ಗಡಿಯಲಿ ಸತತ ಅತಿಕ್ರಮಣ

ಮಾಮಗಾಗ ಮಾಮರಿರಿ
ಸಸಗಾಗ ನೀರಿರಿ
ಮಾಮಗಾಗ ಮಾಮರಿರಿ
ಸಸಗಾಗ ನಿರಿಸ

ಈ ಜೀವಕೆ ಈಗಾಗಲೇ
ಗೊತ್ತಾಗಿದೆ ಕಾರ್ಯಕ್ರಮ
ಮುಚ್ಚಿಟ್ಟರೆ ಈ ಮೋಹವು
ಹೆಚ್ಚಾಗುವ ಸಂಭ್ರಮ

ಜೊತೆಯ ಬಯಸುತ ಪ್ರತಿಯ ನಿಮಿಷವನು ನಿಮಿಷವನು
ಹೃದಯ ಮರೆತಿದೆ ಉಳಿದ ಕೆಲಸವನು

ತುರ್ತಿನಲ್ಲಿ ಗೀಚಿದ
ಅರ್ದಂಬರ್ದ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದ
ಎಂದು ಯಾರು ಕಾಣದ
ಅಂದವಾದ ಬಣ್ಣದ
ಸ್ವಪ್ನದಲ್ಲೇ ಭಾಗವಹಿಸು ಆಗದ
ಸಂತೆಯ ಮಧ್ಯವು ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ

ನಾಲ್ಕು ದಿನದ ಜೀವನ ಜೀವನ
ಪ್ರೀತಿಸೋಣ ಪ್ರೀತಿಸೋಣ

Turthinalli geechida song video :

Leave a Reply

Your email address will not be published. Required fields are marked *

Contact Us