Categories
Vijay Prakash

Thund haikla sahavasa lyrics ( ಕನ್ನಡ ) – Drama – super cine lyrics

Thund haikla sahavasa – Vijay Prakash Lyrics

Singer Vijay Prakash

Thund Haikla Sahavasa song details – Drama

▪ Movie: Drama
▪ Music Lable: Anand Audio
▪ Music: V. Harikrishna
▪ Lyrics: Yogaraj Bhat
▪ Singer: Vijay Prakash

Thund haikla sahavasa lyrics in Kannada – Drama

ತುಂಡು ಹೈಕ್ಲು ಸಹವಾಸ – ಡ್ರಾಮ

ತುಂಡು ಹೈಕ್ಲು ಸಹವಾಸ ಮೂರ್‍ ಹೊತ್ತು ಉಪವಾಸ
ಒಬ್ಬ ಟೀಕೆ ವೆಂಕಟೇಶ ಒಬ್ಬ ಕ್ವಾಟ್ಲೆ ಸತೀಶ…
ಯೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ,
ಊರ್ ಹಾಳು ಮಾಡೊದಕ್ಕೆ ರೀಸರ್ಚ್ ನಡ್ಸವ್ರೇ..
ಹೆಂಗೆ ಹಾಡಿದರೂ ಬಾಯ್ ನೋಯ್ತವೇ…
ಇನ್ನೂ ಕೇಳಿದರು ಕಿವಿ ಹೋಯ್ತವೇ…
ಹೆಂಗೆ ಹಾಡಿದರು ಬಾಯ್ ನೋಯ್ತದೆ
ಇನ್ನೂ ಕೇಳಿದರೆ ಕಿವಿ ಹೋಯ್ತದೇ…
ತುಂಡು ಹೈಕ್ಲು ಸಹವಾಸ ಮೂರ್‍ ಹೊತ್ತು ಉಪವಾಸ
ಒಬ್ಬ ಟೀಕೆ ವೆಂಕಟೇಶ ಒಬ್ಬ ಕ್ವಾಟ್ಲೆ ಸತೀಶ…

ಇವ್ರು ಕಾಲು ಇಟ್ಟ್ರು ಅಂದ್ರೆ ಅದೇ ರೋಡು
ಈ ನನ್ ಮಕ್ಳಿಗೆ ಬಯೋ-ಡಾಟ ಬೇರೆ ಕೇಡು
ಕೇಡೊ…
ಯವ್ವನಾದ ಹೊಳೆಯಲ್ಲಿ ಹಳೆ ಬೋಟ್
ಬೋಟಲ್ಲಿ ನೂರ ಎಂಟು ತೂತು..
ಬೆಳಗಾಗೆದ್ದು ಬೆಟ್ಟಕ್ಕೆ ದಾರ ಕಟ್ಟಿ ಎಲ್ದವ್ರೇ…
ಓಡುತ್ತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೇ
ಅನಾಸಿನ್ನು ತಿಂದ್ರು ತಲೇ ನೋಯ್ತದೇ…
ಚಿಂತೆಲೀ ಊಟ ಬಿಟ್ಟರೆ ಗ್ಯಾಸು ಆಯ್ತದೇ..
ಅನಾಸಿನ್ನು ತಿಂದ್ರು ತಲೇ ನೋಯ್ತದೇ…
ಚಿಂತೆಲೀ ಊಟ ಬಿಟ್ಟರೆ ಗ್ಯಾಸು ಆಯ್ತದೇ..

ತುಂಡು ಹೈಕ್ಲು ಸಹವಾಸ ಮೂರ್‍ ಹೊತ್ತು ಉಪವಾಸ
ಒಬ್ಬ ಟೀಕೆ ವೆಂಕಟೇಶ ಒಬ್ಬ ಆ್ಯಂ ಸತೀಶ
ವೆಂಕಟೇಶಾ….. ಸತೀಶಾ…..
ವೆಂಕಟೇಶ ಸತೀಶ ವೆಂಕಟೇಶ ಸತೀಶ …

ದೊಡ್ಡೊರು ಕೊಡೊದಿಲ್ಲಾ ಪರ್ಮಿಷನ್ನು,
ಕಾಂಪೌಂಡ್ ಹಾರುತಿದೆ ಜನರೇಷನ್ನು ಜನರೇಷನ್ನೋ….
ಬೇಕಿಲ್ಲ ಪ್ರಳಯಕ್ಕೆ ಕಾಯೊದಿನ್ನು
ತುಂಡ್ ಹೈಕ್ಲು ಮುಳುಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ
ಹಗಲು ರಾತ್ರಿ ರಾಧ್ಧಾಂತ
ಬಿಳಿ ಗಡ್ಡ ಬಂದಾಗ ಹೇಳಿದೆಲ್ಲಾ ವೇದಾಂತ
ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂಥವೇ..
ಪ್ರತಿ ಎಂಡಿನಲ್ಲೂ ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂಥವೇ..

ತುಂಡು ಹೈಕ್ಲು ಸಹವಾಸ
ಮೂರ್‍ ಹೊತ್ತು ಉಪವಾಸ ಸ ಸ ಸ
ಒಬ್ಬ ಟೀಕೆ ವೆಂಕಟೇಶ
ಒಬ್ಬ ಕ್ವಾಟ್ಲೇ ಸತೀಶ ಸ ಸ ಸ …

Leave a Reply

Your email address will not be published. Required fields are marked *

Contact Us