Theredide mane lyrics ( ಕನ್ನಡ ) – Hosa belaku – Super cine lyrics

 Theredide mane lyrics – Hosa belaku 



Theredide mane song details 

  • Song : Theredide mane
  • Movie : Hosa belaku 
  • Singer : S Janaki , Vani Jayaram
  • Lyrics : Kuvempu

Theredide mane lyrics in Kannada

ತೆರೆದಿದೆ ಮನೆ ಸಾಂಗ್ ಲಿರಿಕ್ಸ್

ತೆರೆದಿದೇ ಮನೆ ಓ ಬಾ ಅತಿಥಿ 
ತೆರೆದಿದೆ ಮನೆ ಓ ಬಾ ಅತಿಥಿ 
ತೆರೆದಿದೆ ಮನೆ ಓ ಬಾ ಅತಿಥಿ 
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನ್ನು ತಾ ಅತಿಥಿ 

ತೆರೆದಿದೆ ಮನೆ ಓ ಬಾ ಅತಿಥಿ 
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನ್ನು ತಾ ಅತಿಥಿ 

ಯಾವ ರೂಪದೊಳು ಬಂದರೂ ಸರಿಯೆ
ಯಾವ ವೇಷದೊಳು ನಿಂದರೂ ಸರಿಯೆ
ಯಾವ ರೂಪದೊಳು ಬಂದರೂ ಸರಿಯೆ
ಯಾವ ವೇಷದೊಳು ನಿಂದರೂ ಸರಿಯೆ
ನೇಸರುದಯದೊಳು ಬಹೆಯ ಬಾ
ತಿಂಗಳಂದದಲಿ ಬಹೆಯ ಬಾ

ತೆರೆದಿದೆ ಮನೆ ಓ ಬಾ ಅತಿಥಿ 
ಹೊಸ ಬೆಳಕಿನ ಹೊಸ ಗಾಳಿಯ
 ಹೊಸ ಬಾಳನ್ನು ತಾ ಅತಿಥಿ 

ಇಂತಾದರೂ ಬಾ ಅಂತಾದರೂ ಬಾ ಎಂತಾದರೂ ಬಾ ಬಾ ಬಾ 
ಇಂತಾದರೂ ಬಾ ಅಂತಾದರೂ ಬಾ
ಎಂತಾದರೂ ಬಾ ಬಾ ಬಾ 
ಬೇಸರವಿದನು ಸರಿಸುವ ಹೊಸಬಾಳ ಉಸಿರಾಗಿ ಬಾ ಬಾ ಬಾ 

ತೆರೆದಿದೆ ಮನೆ ಓ ಬಾ ಅತಿಥಿ 
ಹೊಸ ಬೆಳಕಿನ ಹೊಸ ಗಾಳಿಯ
 ಹೊಸ ಬಾಳನ್ನು ತಾ ಅತಿಥಿ 

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನೆ ಓ ಬಾ 
ಹೊಸ ತಾಣದ ಹೊಸ ಗಾನದ
ಹೊಸ ತಾಣದ ಹೊಸ ಗಾನದ
ರಸ ಜೀವನ ತಾ ತಾ ತಾ 

ತೆರೆದಿದೆ ಮನೆ ಓ ಬಾ ಅತಿಥಿ 
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನ್ನು ತಾ ಅತಿಥಿ 
ಹೊಸ ಬಾಳನ್ನು ತಾ ಅತಿಥಿ 
ಹೊಸ ಬಾಳನ್ನು ತಾ ಅತಿಥಿ


Theredide mane song video : 

1 thought on “Theredide mane lyrics ( ಕನ್ನಡ ) – Hosa belaku – Super cine lyrics”

Leave a Comment

Contact Us