Thande kodiso seere lyrics ( ಕನ್ನಡ ) – Midida hrudayagalu – super cine lyrics

Thande kodiso seere – Dr. Rajkumar Lyrics

Singer Dr. Rajkumar

Thande kodiso seere song details – Midida hrudayagalu

▪ Song: THANDE KODISO SEERE
▪ Singer: DR RAJKUMAR
▪ Lyricist: HAMSALEKHA
▪ Film: MIDIDA HRUDAYAGALU
▪ Music: HAMSALEKHA

Thande kodiso seere song lyrics in Kannada – Midida hrudayagalu

ತಂದೆ ಕೊಡಿಸೊ ಸೀರೆ
ಮದುವೆ ಆಗೊ ವರೆಗೆ
ತಾಯಿ ಉಡಿಸೊ ಸೀರೆ
ತಾಯಿ ಆಗೊ ವರೆಗೆ
ಬಂಧು ಕೊಡಿಸೊ ಸೀರೆ ಬಣ್ಣ ಹೋಗೊ ವರೆಗೆ
ಗಂಡ ಕೊಡಿಸೊ ಸೀರೆ ಕುಂಕುಮ ಇರುವ ವರೆಗೆ
ಹೆಣ್ಣಿನ ಜನುಮ ಕಳೆವ ವರೆಗೆ
ಮಣ್ಣಿನ ಮಮತೆ ಮರೆವ ವರೆಗೆ

ಭೂಮಿ ಎಂದು ಜನ ಭಾರ ಎನ್ನುವುದಿಲ್ಲ
ತಾಯಿ ಎಂದು ತನ್ನ ಮಗುವ ಬಿಡುವುದಿಲ್ಲ
ಇದ್ದು ಸತ್ತ ಹಾಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ತಾಯಿ

ಸೀತ ಮಾತೆ ತನ್ನ ಗಂಡನ ಅನುಸರಿಸಿದರೆ
ಗಂಗೆ ಗೌರಿ ತನ್ನ ಕಥೆಯ ಅನುಸರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು
ಹೃದಯ ಮಿಡಿವವರೆಗೆ
ಪ್ರೇಮದ ತುತ್ತ ತುದಿಯವರೆಗೆ
ಬಾಳಿನ ಗುಟ್ಟು ತಿಳಿವವರೆಗೆ

ತಾ ನಾ ನಾ ನಾ ನಾ ತಂದನಾನೋ
ಹೋ ಹೋ ಹೋ ಹೋ ಓ ಓ

ಒಳ್ಳೆ ಮನಸ್ಸು ಇದ್ದರೇನೆ ಕಷ್ಟವಂತೆ
ಕರಗೊ ಹೃದಯ ಇದ್ದರಂತೂ ಚಿಂತೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸ್ಸಿನಲ್ಲಿ
ಬಾಳು ಕಂಡ ನೀರು ಮಿಡಿದ ಹೃದಯದಲ್ಲಿ

ತಂದೆ ಕೊಡಿಸೊ ಸೀರೆ
ಮದುವೆ ಆಗೊ ವರೆಗೆ
ತಾಯಿ ಉಡಿಸೊ ಸೀರೆ
ತಾಯಿ ಆಗೊ ವರೆಗೆ
ಬಂಧು ಕೊಡಿಸೊ ಸೀರೆ
ಬಣ್ಣ ಹೋಗೊ ವರೆಗೆ
ಗಂಡ ಕೊಡಿಸೊ ಸೀರೆ
ಕುಂಕುಮ ಇರುವ ವರೆಗೆ
ಹೆಣ್ಣಿನ ಜನುಮ ಕಳೆವ ವರಗೆ
ಮಣ್ಣಿನ ಮಮತೆ ಮರೆವ ವರೆಗೆ

ತಂದೆ ಕೊಡಿಸೊ ಸೀರೆ

Leave a Comment

Contact Us