Thandana thandana song details
- Song : Thandana thandana
- Singer : Dr Rajkumar , Manjula Gururaj
- Lyrics : Hamsalekha
- Movie : Parashuram
- Music : Hamsalekha
Thandana thandana lyrics in Kannada
ತಂದಾನ ತಂದಾನ ಸಾಂಗ್ ಲಿರಿಕ್ಸ್
ತಂದಾನ ತಂದಾನ ಈ ಅಂದ ತಂದಾನ
ಚಂದಾನ ಚಂದಾನ ನಾನೀಗ ಚಂದಾನ
ಬಾ ಬಾರೊ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂತ ಗಂಡ್ಯಾರಲ್ಲಿ
ನೀನ್ನೆದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ದಂತನ ದಂತನ ನಿನ್ನ ಮಯ್ಯಿ ದಂತನ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂತ ಹೆಣ್ಯಾರಲ್ಲಿ
ನಿನ್ನೆದುರಲ್ಲಿ ನವಿಲಿನ ಹೆಸರ್ಯಾಕಿಲ್ಲಿ
ಗುಹೆಯ ಮ್ಯಾಲೆ ಚೂಪಿನ ಕಂಬ
ಕಂಬದ ಮ್ಯಾಲೆ ಪಿಳಿ ಪಿಳಿ ಹಕ್ಕಿ ಹೋ
ಹಕ್ಕಿಗೂ ಮ್ಯಾಲೆ ಕರಿಯ ಬಂದೆ ಆಹಾ
ಬಂಡೆಯ ನಡುವೆ ಊರಿಗೆ ದಾರಿ
ಬಾ ಬಾರೋ ಚೆಲುವ ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ಜಡೆಗೆ ಹೂವ ಮುಡಿಸೀಗ
ಬಾಯಿ ಮೂಗು ಕಣ್ಣೆ ಬೈತಲೆಯೆ ದಾರಿ ಹೆಣ್ಣೆ
ಬಾ ಬಾರೊ ಗೆದ್ದೆ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂತ ಗಂಡ್ಯಾರಿಲ್ಲಿ
ನಿನ್ನೆದುರಲ್ಲಿ ನವಿಲಿನ ಹೆಸರ್ಯಾಕಿಲ್ಲಿ
ಎಳಸಿರುವಾಗ ಹಸುರಿನ ಬಣ್ಣ ಹೂಂ
ವಯ್ಯಸ್ಸಿರುವಾಗ ಕೆಂಪನೆ ಬಣ್ಣ
ಹೋ
ಬಾಯ್ಗಿಟ್ಟರೆ ಸಾಕು ಓಕುಳಿಯನ್ನ ಹೂಂ
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ತುಟಿಗೆ ಖಡಗ ತೊಡಿಸೀಗೆ
ಹಣ್ಣು ನೇರಳೆ ಹಣ್ಣು ನನ್ನ ಮ್ಯಾಲೆ ನಿನಗಿದೆ
ಕಣ್ಣು
ಬಾ ಬಾರೆ ಗೆದ್ದೆ ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂತ ಹೆಣ್ಯಾರಲ್ಲಿ
ನಿನ್ನೆದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ಚಂದಾನ ಚಂದಾನ ನಾನೀಗ ಚಂದಾನ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂತ ಹೆಣ್ಯಾರಲ್ಲಿ
ನಿನ್ನೆದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ