Thalme lyrics ( ಕನ್ನಡ ) – Rahul dit-o – Super cine lyrics

Thalme – Rahul dit-o Lyrics

Singer Rahul dit-o

Thalme song details – Rahul dit-o

▪ Song : Thalme
▪ Singer : Rahul dit-o

Thalme song lyrics in Kannada – Rahul dit-o

ಕೆಲವು ವಿಷಯಗಳು, ನಾನು ಅನ್ಕೊಂಡಂಗೆ ಆಗ್ತಾ ಇಲ್ಲಾ.
ಎಲ್ಲಿ ನೋಡಿದ್ರೂ ಮೋಸ, ಸ್ವಾರ್ಥ, ಹೊಟ್ಟೆಉರಿ, ಡವ್ವು, ಡಬಲ್ ಗೇಮ್ಗಳು.
ಕೆಲ್ಸ ಆಗೋವರ್ಗು ಅಷ್ಟೇ ಜನ. ಬರಿ ಬೇಳೆಕಾಳು ಬೇಯಿಸ್ಕೂಳಕಷ್ಟೇ ನೋಡ್ತಾರೆ.
ಜೊತೆಯಲ್ಲಿ ಇಡ್ಕೊಂಡೇ ಕತ್ತು ಕುಯ್ಯೋರು ಜಾಸ್ತಿ.
ಕಷ್ಟಪಟ್ಟು ಏನೋ ಮಾಡ್ಬೇಕಂತ ಹೊರಟಿದೀನಿ ಅಂದ್ರೆ ತಡಿ ನಿನ್ ಕಾಲ್ ಎಳೀಬೇಕು ಅಂತಾರೆ.
ಸಾಕಾಗಿದೆ ನಂಗಿವೆಲ್ಲಾ ಹಿಂಗೇ ಆದ್ರೆ ನನ್ ಕರಿಯರ್, ನನ್ ಫ್ಯೂಚರ್ ಏನ್ ಆಗುತ್ತೋ.

ಇರಲಿ ತಾಳ್ಮೆ ಆಗೋದೆಲ್ಲಾ ಒಳ್ಳೇದಕ್ಕೆ,
ಇರದೇ ತಾಳ್ಮೆ ಆಗೋದಿಲ್ಲಾ ಗೆಲ್ಲೋದಕ್ಕೆ,
ಇರಲಿ ಜಾಣ್ಮೆ ಬರಿ ಏಣಿ ಹತ್ತೋದಕ್ಕೆ,
ಇರದೇ ಜಾಣ್ಮೆ ಕಷ್ಟ ಗುರಿ ಮುಟ್ಟೋದಕ್ಕೆ.

ಬೇಡ ಅಂದ್ರು ತಗೋ ತಗೋ ಕೊಡುತೀನಿ ಅಡ್ವೈಸ್.
ಹೇಳ್ಕೋಬೇಡ ಹಂಚುತಿದ್ರೆ ಎಲ್ಲಾ ಕಡೆ ಗುಡ್ ವೈಬ್ಸ್
ಚೆನ್ನಾಗಿರೋವರ್ಗುನು ಎಲ್ಲಾರುನು ನೈಸ್ ನೈಸ್
ಉಲ್ಟಾಹೊಡೆದರೆ ಆಡೇಬಿಡುತ್ತಾರೆ ಐಸ್ ಪೈಸ್
ನೀನು ಬೆಳಿತಿದ್ಯಾ ಅಂದ್ರೆ ನಿನ್ನ ನೋಡೋರಿಗೆ ಉರಿ
ಜೊತೇಲಿರೋರೇನೇ ಹಾಕೋದು ಬೆನ್ನಿಗೆ ಮಗ ಚೂರಿ
ಮುಂದೆ ಕಾಣಿಸೋದು ಒಂದು ಮುಖ ಹಿಂದೆ ಬೇರೆ ಬೇರೆ
ಅದಕ್ಕೇನೆ ಇವಾಗ್ಲೆನೇ ಹಾಕ್ಕೋ ನಿನ್ನ ಸುತ್ತ ಗೆರೆ

ಮೇಲ್ ಬಂದಷ್ಟು ಜನ ಮೇಲ್ ಮೇಲ್ ಬೀಳುತ್ತಾರೆ
ಕೆಳಗ್ ಬಿದ್ದೋದ್ರೆ ಇನ್ನೂ ಕೆಳಗೇನೇ ತುಳಿತಾರೆ
ಸುಮ್ನೆ ಕುಂತರೆ ಕೈಲಾಗದೋನು ಅಂತಾರೆ
ಜಾಡ್ಸ್ ಒದ್ದರೆ ನಿನ್ನ ಜಾಗ ನಿಂಗೆ ಬಿಡುತ್ತಾರೆ
ಕೆಲವರು ನಿನ್ನ ಲೈಫಲ್ಲಿ ಬಂದ್ ಹೋಗಬೋದು
ಇನ್ ಕೆಲವರು ಕೊನೆವರ್ಗು ಇರುತ್ತಾರೆ ಹೌದು
ಇಷ್ಟ ಇಲ್ಲ ಅಂದ್ರು ಇಷ್ಟು ಜನ ಬೆನ್ ತಟ್ಟಬೋದು
ಇಷ್ಟ ಪಟ್ಟು ಹಿಂದೆ ಬಂದಿರೋರ್ನ ಇಲ್ಲೇ ಇಟ್ಟಿರೋದು

ಆವತ್ತು ಇವತ್ತು ನಂಬಿದೋರಷ್ಟೇ ಜೊತೇಲಿರೋದು
ನಿಯತ್ತು ನಿಯತ್ತಾಗಿರೋರಿಗಷ್ಟೇ ಗೊತ್ತಿರೋದು
ನಾನೆಷ್ಟು ನೀನೆಷ್ಟು ಅನ್ನೋ ಕಾಂಪಿಟೇಷನ್ ಇಲ್ಲಿರೋದು
ಹೊನೆಸ್ಟಾಗಿದ್ದಷ್ಟು ಜನ ನಿನ್ನ ಕಾಲೆಳೆಯೋದು

ಇರಲಿ ತಾಳ್ಮೆ ಆಗೋದೆಲ್ಲಾ ಒಳ್ಳೇದಕ್ಕೆ,
ಇರದೇ ತಾಳ್ಮೆ ಆಗೋದಿಲ್ಲಾ ಗೆಲ್ಲೋದಕ್ಕೆ,
ಇರಲಿ ಜಾಣ್ಮೆ ಬರಿ ಏಣಿ ಹತ್ತೋದಕ್ಕೆ,
ಇರದೇ ಜಾಣ್ಮೆ ಕಷ್ಟ ಗುರಿ ಮುಟ್ಟೋದಕ್ಕೆ.

ಇರಲಿ ತಾಳ್ಮೆ ಆಗೋದೆಲ್ಲಾ ಒಳ್ಳೇದಕ್ಕೆ,
ಇರದೇ ತಾಳ್ಮೆ ಆಗೋದಿಲ್ಲಾ ಗೆಲ್ಲೋದಕ್ಕೆ,
ಇರಲಿ ಜಾಣ್ಮೆ ಬರಿ ಏಣಿ ಹತ್ತೋದಕ್ಕೆ,
ಇರದೇ ಜಾಣ್ಮೆ ಕಷ್ಟ ಗುರಿ ಮುಟ್ಟೋದಕ್ಕೆ.

ಹೋಗೋರೆಲ್ಲಾ ಹೋಗ್ಲಿ ಮುಂದೆ ಬಿಟ್ಟು ಬಿಡು ದಾರಿ
ಹೋಗುವಂತೆ ತಡಿ ತಡಿ ತಡಿ ತಡಿ ಒಂದೆ ಸಾರಿ
ದಾರಿ ಕೊಟ್ಟಿಲ್ಲಂದ್ರೆ ದಾಳಿ ಮಾಡು ಧಿಡೀರಂತ ಹಾರಿ
ಆಗಬೇಡ ನಿಂಗೆ ನೀನೆ ಮಾರಿ ಮೂರಿಗುಪಕಾರಿ

ರೈಟ್ ಕೆಲ್ಸಕೆ ರೆಸ್ಟ್ ತಗೋ ಬೇರೆ ದಾರಿ ಇಲ್ಲಾ
ರೈಟ್ ಮೇಲಿ ಸೀದಾ ಸ್ಟ್ರೈಟ್ ಹೋಗು ರಾಂಗ್ ಆಗದಿಲ್ಲಾ
ಅವಕಾಶಗಳು ಬರ್ತವೆ ಕಾಯ್ಕೊಂಡಿರಲ್ಲಾ
ಪ್ರತಿ ಒಂದ್ ಸೆಕೆಂಡ್ ಮುಂದೆ ಹೋಗಿದ್ ಹಿಂದೆ ಬರೋದಿಲ್ಲಾ

ಅನ್ಕೊಂಬೇಡ ನಿಂಗೆ ಒಳ್ಳೆ ಟೈಮೇ ಬರುತ್ತಿಲ್ಲಾ
ಕಷ್ಟ ಪಡೋರಿಗೆ ಬ್ರೇಕ್ ಬೇಗ ಬೇಗ ಸಿಗದಿಲ್ಲಾ
ಏಕ್ ಧಮ್ ಎದ್ ಮೇಲೆ ಬರೋದ್ರಲ್ಲಿ ತಪ್ಪಿಲ್ಲಾ
ಬ್ರೇಕ್ಡೌನ್ ಮಾಡೋದಕ್ಕೆ ತುಂಬಾ ಜನಕ್ ಗೊತ್ತಿಲ್ಲಾ

ಕಷ್ಟಗಳು ಬರುತ್ತವೆ ಹೇಳದೇನೇ ಕೇಳದೇನೇ
ಕೆಟ್ಟದಾಗುತ್ತಿದ್ರು ಮಾಡುತ್ತಿರು ಬರಿ ಒಳ್ಳೇದೇನೇ
ಯಾರು ಸರಿ ಯಾರು ಸರಿಯಿಲ್ಲ ಗೊತ್ತಿದೆ ತಾನೆ
ನಿಯತ್ತಾಗಿರೋರಿಗೆ ಪ್ರಾಬ್ಲಮ್ಗಳು ಶಾನೆ

ಸರಿ ಹೋಗುತ್ತಂತಾ ಸುಮ್ನಿದ್ರೆ ಸಾಲ್ವ್ ಆಗೋದಿಲ್ಲ
ಏನ್ ಏನ್ ಆಗ್ಬೇಕೊ ಆಗುತ್ತೆ ಅದು ನಮ್ ಕೈಯಲ್ಲಿಲ್ಲಾ
ಆಗದಿದ್ರು ನಡಿ ನುಗ್ಗುತ್ತಿರು ಬೇರೆ ಆಪ್ಷನ್ ಇಲ್ಲಾ
ಇವತ್ತ್ ಇದ್ದಿವಿ ನಾಳೆ ಇರ್ತಿವಾ ಗ್ಯಾರಂಟಿ ಇಲ್ಲಾ

ಇರಲಿ ತಾಳ್ಮೆ ಆಗೋದೆಲ್ಲಾ ಒಳ್ಳೇದಕ್ಕೆ,
ಇರದೇ ತಾಳ್ಮೆ ಆಗೋದಿಲ್ಲಾ ಗೆಲ್ಲೋದಕ್ಕೆ,
ಇರಲಿ ಜಾಣ್ಮೆ ಬರಿ ಏಣಿ ಹತ್ತೋದಕ್ಕೆ,
ಇರದೇ ಜಾಣ್ಮೆ ಕಷ್ಟ ಗುರಿ ಮುಟ್ಟೋದಕ್ಕೆ.

ಇರಲಿ ತಾಳ್ಮೆ ಆಗೋದೆಲ್ಲಾ ಒಳ್ಳೇದಕ್ಕೆ,
ಇರದೇ ತಾಳ್ಮೆ ಆಗೋದಿಲ್ಲಾ ಗೆಲ್ಲೋದಕ್ಕೆ,
ಇರಲಿ ಜಾಣ್ಮೆ ಬರಿ ಏಣಿ ಹತ್ತೋದಕ್ಕೆ,
ಇರದೇ ಜಾಣ್ಮೆ ಕಷ್ಟ ಗುರಿ ಮುಟ್ಟೋದಕ್ಕೆ.
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ಇರಲಿ ತಾಳ್ಮೆ
ರಾಹುಲ್ ಡಿ ಡಿ ಡಿ ಡಿ Dito

Leave a Comment

Contact Us