Tajaa Samachara – Jithin raj Lyrics
Singer | Jithin raj |
Tajaa Samachara song details – Natasaarvabhowma
▪ Song: Tajaa Samachara
▪ Movie: Natasaarvabhowma
▪ Singer: Jithin Raj
▪ Music: D Imman
▪ Lyricist: Jayanth Kaikini
Tajaa Samachara song lyrics in Kannada – Natasaarvabhowma
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;
ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ, ಸಖಿ ನಾನಾಗುವೆ ನಿಪುಣ;
ಕನಸೆಂಬ ಖಜಾನೆ ಇಗೋ ತುಂಬಿದೆ, ತುಸು ದೂರಾದರೂ ಕಠಿಣ
ಘಮಘಮಿಸಿ ಕವಿದ ಹೆರಳಲ್ಲೀಗ ಕಳೆದೋಗೋದೇ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ, ಬರೆಯದಿರುವ ಕಾಗದ
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು
ಬರಿದಾದಂಥ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತ, ಮನ ತಂತಾನೇ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ, ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ, ಹಠ ಹೆಚ್ಚಾಗಿದೆ, ಎದುರೆ ಇರಲು ದೇವತೆ|
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;
ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.
Awesome lyrics