Saradaara baa balina sindhoora lyrics ( ಕನ್ನಡ ) – Parashuram

Saradaara baa balina sindhoora song details

  • Song : Saradaara baa balina sindhoora
  • Singer : Dr Rajkumar , Swarnalatha
  • Lyrics : Hamsalekha
  • Movie : Parashuram
  • Music : Hamsalekha

Saradaara baa balina sindhoora lyrics in Kannada

ಸರದಾರ ಬಾ ಬಾಳಿನ ಸಿಂಧೂರ ಸಾಂಗ್ ಲಿರಿಕ್ಸ್

ಸರದಾರ ಬಾ ಬಾಳಿನ ಸಿಂಧೂರ
ಬಾ ಬಂಗಾರ ನನ್ನ ಸಿಂಗಾರ ಸೇರು ಬಾ ಮಯೂರ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ
ಬೇಳೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಸುಮಗಳ ನಗುವಲ್ಲಿ ನಿನ್ನ ಮೊಗವಿದೆ
ಈ ಲತೆಯಲ್ಲಿ ಬಳುಕುವ ನಿನ್ನ ನಡುವಿದೆ
ಆ ಕೋಗಿಲೆ ಗಾನ ನಿನ್ನ ಧ್ವನಿಯ ಹಾಗಿದೆ
ಆ ರಾಗದ ಮೇಲೆ ನನ್ನ ಪಯಣ ಸಾಗಿದೆ
ಸರದಾರ ಬಾ ಬಾಳಿನ ಸಿಂಧೂರ
ಬೇಳೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಜೀವನ ನಲಿವುದು ನಿನ್ನ ಹಾಡಿಗೆ
ರೋಮಾಂಚನ ನಿನ್ನಯ ಕಣ್ಣ ಮೋಡಿಗೆ
ಈ ಸ್ನೇಹಕೆ ನಾನು ನೂರು ಜನ್ಮ ಬೇಡುವೆ
ಜೊತೆಯಾಗಿರೆ ನೀನು ಏನೆ ಬರಲಿ ಗೆಲ್ಲುವೆ
ಸರದಾರ ಬಾ ಬಾಳಿನ ಸಿಂಧೂರ
ಬೇಳೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ

Saradaara baa balina sindhoora song video :

https://youtu.be/sZJqBB2irtM
Advertisement Advertisement

Leave a Comment

Advertisement Advertisement

Contact Us