Saluge saluge song details
- Song : Saluge saluge
- Singer : Karthik
- Lyrics : Kaviraj
- Movie : Jolly days
- Music : Mickey J Mayer
- Label : Anand audio
Saluge saluge lyrics in kannada
ಸಲುಗೆ ಸಲುಗೆ ಸಾಂಗ್ ಲಿರಿಕ್ಸ್
ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ
ಸೂಚನೇನೆ ಸಿಗಲಿಲ್ಲ ನನಗಂತೂ
ಅಷ್ಟರಲ್ಲೆ ಸೋಜಿಗ ನನಗಿತ್ತು
ಒಲವಿದು ಶುರುವಾಯ್ತು
ದಿನಚರಿ ಬದಲಾಯ್ತು
ಪ್ರತಿ ನಿಮಿಷ ಎನಿಸಿದರೂ ಕೂಡ
ಪರದೇಸಿ ಅಂತೆ ಹೇಳೋದು ಕಾಣೆ ನನ್ನಾಣೆ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ
ಯಾರೊ ಮಂದಿ ಕೇಳಿದರು ನಾನೇನಾ
ನಾನೆ ಕಳೆದು ಹೋಗಿರುವೆ ಅಂದೆನಾ
ಎಡವಿದ ಕಲ್ಲಿನಲೂ
ಅವಳನೂ ಕಾಣುವೆನಾ
ಹೋರಾಡಿ ನಾ ಅಂದು ಬಾಲ್ಯದಲ್ಲಿ
ಹಿಡಿದಂತ ಮೊದಲ ಚಿಟ್ಟೆಯಲಿ
ಪಡೆದಂತ ಸಂತಸ ಇಂದು ಮತ್ತೆ ನನಗಿಲ್ಲಿ
ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ
ಮನಸು ಬೇಕಂತ ಜಾರಿ
ಹೃದಯ ಇನ್ನೆಲ್ಲೋ ಹಾರಿ
ಭಾವ ಮೊದಮೊದಲ ಸಾರಿ
ಈ ಅಚ್ಚರಿ