Roopasi lyrics ( ಕನ್ನಡ ) – Mugulu nage

Roopasi song details

  • Song : Roopasi
  • Singer : Sonu nigam
  • Lyrics : Jayant kaikini
  • Music : V Harikrishna
  • Movie : Mugulu nage
  • Label : D Beats

Roopasi lyrics in Kannada

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ಇಶಾರೆಯ ನೀ ನೀಡೂ ಹುಷಾರಾಗುವೆ..
ನನಗಾಗುವ ಕನಸೆಲ್ಲವೂ ಬರಿ ಇಂಥವೇ..

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ…
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ…
ಮಂದಹಾಸವೇ ನನ್ನ ಆಸ್ತಿಯು.. ಈಗ ನಿನ್ನ ಪಾಲು..
ತಮಾಷೆಗೂ ಕೈ ಚಾಚು ತಯಾರಾಗುವೆ…
ಬಡಪಾಯಿಯ ಮನರಂಜನೆ ಬರೀ ಇಂಥದೇ…

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ…
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ..
ಎಲ್ಲೇ ಎಸೆದರು ನಿನ್ನ ಕಣ್ಣಲೇ ಬಂದು ಬೀಳುವಾಸೆ..
ನಿನ್ನಾ ಜೀವದಲ್ಲೀಗ ಜಮಾ ಆಗುವೆ…
ನಡು ಬೀದಿಯ ಜ್ನ್ಯಾನೋದಯ ಬರೀ ಇಂಥವೇ…

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

Roopasi song video :

Leave a Comment

Contact Us