Rekkeya kudure yeri lyrics ( kannada ) – kavacha – super cine lyrics

Rekkeya kudure yeri – S P Balasubramanya , Shreya Jaydeep Lyrics

Singer S P Balasubramanya , Shreya Jaydeep
Singer 4 music
Song Writer Nagendra prasad

ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ
ಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ

ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ ಬರುವ ನನ್ನ ಅಪ್ಪಯ್ಯ

ಕಾಮನ ಬಿಲ್ಲನ್ನು ಕೇಳಿದ ತಕ್ಷಣ ಕೈಯ್ಯಲ್ಲಿ ಇಡುತಾನೆ
ಹುಣ್ಣಿಮೆ ಬೆಳಕ ವಸ್ತ್ರವ ಮಾಡಿಸಿ ತಂದು ಕೊಡ್ತಾನೆ
ಕಾಮನಬಿಲ್ಲನ್ನು ಮಾಡಿಕೊಳ್ಲುವೆನು ಕೈಯ್ಯ ಬಳೆಯಾಗಿ
ಹುಣ್ಣಿಮೆ ವಸ್ತ್ರವ ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ
ಸ್ವರ್ಗದ ಮೇನೆ ಇಂದ್ರನ ಆನೆ
ಎದುರು ಇಡುವನು ನಿನ್ನನ್ನು ಮುದ್ದಿಸಿ ಬರುವನು
ಬೊಂಬೆಯ ಮಾಡಿಕೊಂಡು ಅದರ ಜೊತೆಗೆ ಆಡುವೆನು
ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನನ್ನ ಅಪ್ಪಯ್ಯ

ಹಂಸ ನಾವೆಯಲ್ಲಿ ರಾಜಕುಮಾರಿಯ ಹಾಗೆ ನಿನ್ನನ್ನು
ಏಳು ಬೆಟ್ಟದಾಚೆ ಏಳು ಕಡಲಲ್ಲೂ ಸುತ್ತಿಸಿ ಬರ್ತಾನೆ
ಅಲ್ಲಾ ಉದ್ದೀನನ ಅದ್ಭುತ ದೀಪದ ಹಾಗೆ ನನ್ನಪ್ಪ
ಎಲ್ಲ ಸಂತೋಷ ನೀಡುತ್ತಾ ನನ್ನನ್ನು ಕಂದ ಅಂತಾನೆ
ಕವಿತೆಯ ಹಾಡಿ ಖುಷಿಗಳ ನೀಡಿ
ಸುಂದರ ಕಥೆಗಳು ಹೇಳುತಾ ನಿದಿರೆ ಮಾಡಿಸುವ
ಹಿಂತಿರುಗಿ ಹೋಗದಂತೆ ನನ್ನ ಈ ತೋಳಲ್ಲಿ ಬಂಧಿಸುವೆ

ಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನ ಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

Leave a Comment

Contact Us