Rekke aaguve – Vasuki Vaibhav Lyrics
Singer | Vasuki Vaibhav |
Rekke aaguve song details – Aatakkuntu lekkakkilla
▪ Music – Nobin Paul
▪ Singer – Vasuki Vaibhav
▪ Lyrics – Vasuki Vaibhav
▪ Movie – Aatakkuntu lekkakkilla
Rekke aaguve song lyrics in Kannada – Aatakkuntu lekkakkilla
ನೀನೆ ನನ್ನ ವೇದನೆ
ಇನ್ನು ನೀನೆ ನನ್ನೆಲ್ಲಾ ನಿವೇದನೆ
ನೀನೆ ತಾನೆ..
ನನ್ನ ಜೀವ ಸೂಚನೆ
ನನ್ನಲ್ಲಿದೆ…
ನಿನ್ನೆ ಹೋಲೋ ಕಲ್ಪನೆ
ಆಲಿಸು ನಸು ನಾಚುತ
ನನ್ನೆಲ್ಲ ಬಣ್ಣನೆ
ರೆಕ್ಕೆ ಆಗುವೆ !
ನೀ ಹಾರೊ ವೇಳೆಗೆ ನಾನು
ಹೊ ಹೊ
ರೆಪ್ಪೆ ಆಗುವೆ!
ಕೊನೆವರೆಗೂ ನಿನ್ನ ಬಾಳ ಕಾಯುವೆ
ತುದಿಗಾಲಲ್ಲಿ ನಿಂತಿದೆ ಹೃದಯ
ಕನಸೆಲ್ಲವ ತೆರೆದಿಡಲು
ಸಣ್ಣ ಸಣ್ಣ ಸೊಗಸಿನ ಉದಯ
ಕಣ್ಣ ಮುಂದೆ ನೀನಿರಲು
ಬೇರೆ ಇಲ್ಲವ
ನಾ ನೆನೆವೆ ನಿನ್ನ ನಂತರ
ನಿನಗೆ ಸೋಲುವ
ವರವ ನಾ ಕೋರುವೆ ದೇವರ
ಬದುಕಿನ ತುಂಬವು ನೀನಿರದೆ
ಬದುಕಲಿ ಹೇಗೆ ನಾ ನೀನಿರದೆ
ಬಾವನೆಗಳೆಲ್ಲವಾ ನೀ ತೊರೆದೆ
ನೀನೆ ನನ್ನ ಖುಷಿ ಎಲ್ಲವು
ನಿನ್ನ ಮುಂಗುರುಳ ತೂಗೊ ಗಾಳಿಯು ನಾನೆ ಆಗುವೆ
ನಿನ್ನ ಮುಂಬರುವ ನೋವಿಗು ಇಂದು ನಾನೆ ಮಾಗುವೆ
ಅಂಗಯ್ಯ ಮೇಲಿರುವುದೆಲ್ಲ
ನಿನ್ನ ತೋರುವ ರೆಕ್ಕೆಗಳು
ಅಂಗಾಲಿನ ನಡಿಗೆಗಳೆಲ್ಲಾ
ನಿನ್ನ ಸೇರುವ ದಾರಿಗಳು
ಹಣೆಯ ಮೇಲಿನ ಹೊಳೆವ
ತಾರೆಯಾಗುವೆ
ಸಮಯ ಸೋತರು
ನಿನ್ನ ನಗುವಾಗಿ ಸಾಗುವೆ
ನನ್ನ ಕನಸೆಲ್ಲವು ನೀನೆ ಹೊಣೆ
ನೀನೆ ಅದರ ಶುರು ನೀನೆ ಕೊನೆ
ಬದಲಿತು ನಿನ್ನ ಕಂಡು ನನ್ನ ಬಾವನೆ
ನೀನೆ ನನ್ನ ಖುಷಿ ಎಲ್ಲವು
ಇರುಳಲು ಕಾಣುವ ಹೊಳಪದು
ನೀನು ನನ್ನಯ ಪಾಲಿಗೆ
ಇರುವೆನು ನಾನು ತಲುಪಲು ನಿನ್ನ ಉಳಿದ ಬಾಳಿಗೆ
ನೀನೆ ನನ್ನ ಯೋಚನೆ
ಇನ್ನು ನೀನೆ ನನ್ನೆಲ್ಲಾ ಯೋಜನೆ
ನೀನೆ ತಾನೆ
ಒಲವ ಸೂಚನೆ
ನನ್ನಲ್ಲಿದೆ
ನಿನ್ನೆ ಹೋಲೊ ಕಲ್ಪನೆ
ಆಲಿಸು ನಸು ನಾಚುತ
ನನ್ನೆಲ್ಲಾ ಬಣ್ಣನೆ
ರೆಕ್ಕೆ ಆಗುವೆ ನೀ ಹಾರೊ ವೇಳೆಗೆ ನಾನು
ಹೊ ಹೊ
ರೆಪ್ಪೆ ಆಗುವೆ
ಕೊನೆವರೆಗೂ ನಿನ್ನ ಬಾಳ ಕಾಯುವೆ