Raja muddhu raja lyrics – Sampathige saval

Raja muddhu raja song details
- Song : Raja muddhu raja
- Movie : Sampathige saval
- Singer’s : P B Srinivas , S Janaki
- Lyricist : Udayashankar
- Music : G K Venkatesh
Raja muddhu raja lyrics in Kannada
ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ
ಕೋಪವೇಕೆ
ನಿನಗಾಗಿ ಬಂದೆ ಒಲವನ್ನು ತಂದೆ, ನನದೆಲ್ಲ ನಿಂದೇ,
ರಾಜಾ ಮುದ್ದು ರಾಜಾ
ನೂಕುವಂತ ಕೋಪ ನನ್ನಲೇಕೆ
ಮುದ್ದು ರಾಜಾ
ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ
ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ…
ಆಸೆ ಬಾರದೇನು, ನಾನಂದವಿಲ್ಲವೇನು, ಮನಸಿನ್ನು ಕಲ್ಲೇನು
ರಾಜ ಬೇಡ ರಾಜಾ, ನೂಕುವಂತ ಕೋಪ ನನ್ನಲೇಕೆ, ಮುದ್ದು ರಾಜಾ…
ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ… ನಾ ಬಲ್ಲೇ….
ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ…
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು, ನೀ ನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ…
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ…
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ, ನಿನ್ನಾಣೆ ಸುಳ್ಳಲ್ಲ ರಾಜಾ
ನೂಕುವಂತ ಕೋಪ ನನ್ನಲೇಕೆ
ಮುದ್ದು ರಾಜಾ
ನನ್ನೇಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲ ಸರಿಯಲ್ಲ
ನಮ್ಮ ಊರಿಲೆಲ್ಲ ಗಂಡೋಬ್ಬನು ಹುಟ್ಟಿಲ್ಲ
ಅದಕ್ಕಾಗಿ ಬಿಡಲಾರೆ ವೀರ ಹಮ್ಮೀರ
ರಾಜಾ ಮುದ್ದು ರಾಜಾ
ನೂಕುವಂತ ಕೋಪ ನನ್ನಲೇಕೆ
ಪ್ರೀತಿಯಿಂದ ಮೈಯ ಬಳಸಬೇಕೆ
ಇನ್ನೂ ಬೇಕೆ..
ಸಾಕೆ..ಇಲ್ಲ ಬೇಕೆ..
ಸಾಕೆ..ಇಲ್ಲ ಬೇಕೆ..