Putta putta aase lyrics ( ಕನ್ನಡ ) – Sinnga – Super cine lyrics

Putta putta aase – Anuradha bhat Lyrics

Singer Anuradha bhat

About the song

▪ Song: Putta Putta Aase
▪ Singers: Anuradha Bhat
▪ Film: SINNGA
▪ Music: DHARMA VISH
▪ Lyricist: KAVIRAJ

Putta putta aase lyrics in Kannada

ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೊ ಆಸೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ

ಆಗಾಗ ಬೇಕಂತ ಹುಸಿಕೋಪ ತೋರೊದ
ನಿನ್ನನ್ನ ಮುದ್ದಾಡಿ ರಮಿಸೋಕೆ ಬರಬೋದ
ಲೈಟ್ ಆಗಿ ಪೋಲಿ ಜೋಕು ಕಿವಿಯಲ್ಲಿ ಹೇಳ್ಬೋದ
ನೀ ನನ್ನ ತುಂಟಿ ಅಂತ Sweet’ah’ಗಿ ಬೈಬೋದ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿ ಯಾಗಿ ಕೇಳು ಕೇಳು ಒಂದೊಂದೊಂದಾಗಿ

ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ

ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಬೇಕಂತ ಕಾಡಲ್ಲಿ ನಾವ್ ದಾರಿ ತಪ್ಪೋಣ
ಬೋರಾಗೊತಂಕ ಅಲ್ಲೇ ಹಾಯಾಗಿ ಇರಬೋದ
ನೂರೆಂಟು ಆಸೆ ಉಂಟು ಬೋರಾದ್ರೂ ಕೇಳ್ಬಾರ್ದ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ

ಜನ್ಮವಿಡೀ ಪ್ರೀತ್ಸೊದಕ್ಕೆ ಮಾಡು ಅಂತ ಇಂದೇ ಸಂದಾನ

ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೊ ಆಸೆ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ

Leave a Comment

Contact Us